ಟೆನಿಕಾಯ್ಟ್ ಪ್ರತಿಭೆಗೆ ಸನ್ಮಾನ

ಗಂಗೊಳ್ಳಿ: ಇತ್ತೀಚೆಗೆ ತಮಿಳುನಾಡಿನ ಸೇಲ೦ನಲ್ಲಿ ನಡೆದಿದ್ದ  ರಾಷ್ಟ್ರಮಟ್ಟದ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆಕಾಶ್ ಖಾರ್ವಿ ಇವರನ್ನು ಇತ್ತೀಚೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿ೦ದ ಸನ್ಮಾನಿಸಲಾಯಿತು. ಈ  ಸ೦ಧರ್ಭದಲ್ಲಿ  ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್,ಅ೦ಕಣಕಾರ ಶಿವಾನ೦ದ ಕಾರ೦ತ,ಯೋಜನಾಧಿಕಾರಿ ಹೆಚ್.ಭಾಸ್ಕರ್ ಶೆಟ್ಟಿ ವಿದ್ಯಾರ್ಥಿ ಪ್ರತಿನಿಧಿಗಳಾದ ನಾಗಭೂಷಣ್ ಮತ್ತು ಕಾರ್ತಿಕ್ ಬಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಮಾರ್ಗದರ್ಶನ ನೀಡಿದ್ದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com