ಆನೆಗುಡ್ಡೆ ದೇವಳದಲ್ಲಿ ಸುವರ್ಣ ಕಲಶ ಸಮರ್ಪಣೆ

ಕುಂಭಾಸಿ: ಆನೆಗುಡ್ಡೆ ದೇವಳದ ಶ್ರೀವಿನಾಯಕ ದೇವರಿಗೆ ಶನಿವಾರ ಬೆಳಗ್ಗೆ ಮೀನಲಗ್ನ ಸುಮೂರ್ತದಲ್ಲಿ ಪ್ರಧಾನ ಸುವರ್ಣ  ಕಲಶ ಸಮರ್ಪಿಸಲಾಯಿತು. 4 ವರ್ಷದ ಹಿಂದೆ ಕ್ಷೇತ್ರದಲ್ಲಿ ನಡೆಸಿದ ಬ್ರಹ್ಮಕುಂಭಾಭಿಷೇಕದ ಸವಿನೆನಪಿನಲ್ಲಿ ವರ್ಷ ವರ್ಷವು ನಡೆದುಕೊಂಡು ಬರುತ್ತಿರುವ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಈ ಬಾರಿ ದೇವಳವು ಭಕ್ತರ ಸಹಕಾರದೊಂದಿಗೆ 2ಕೆಜಿ 17 ಗ್ರಾಂ ತೂಕದ ಅಷ್ಟಲಕ್ಷ್ಮೀಯರು ಮತ್ತು ಗಣಪತಿಯನ್ನೊಳಗೊಂಡ ಆಕರ್ಷಕ ಸುವರ್ಣ ಕಲಶ ಸಮರ್ಪಿಸಿತು. 
     ಸುವರ್ಣ ಕಲಶಾಭಿಷೇಕದ ನಿಮಿತ್ತ ಬೆಳಗ್ಗೆ 5ಗಂಟೆಯಿಂದ ತತ್ವಹೋಮ, ಕಲಾಹೋಮ ಇತ್ಯಾದಿ ಧಾರ್ಮಿಕ ವಿಧಿ ನಡೆಸಿ ಬೆಳಗ್ಗೆ 8.52ಗಂಟೆಗೆ ಶುಭಮಹೂರ್ತದಲ್ಲಿ ಸುವರ್ಣ ಕಲಶಾಭಿಷೇಕ ನಡೆಸಿ ಲೋಕಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು.
  ಇದೇ ಸಂದರ್ಭದಲ್ಲಿ ಶ್ರೀದೇವರಿಗೆ 108 ರಜತ ಕಲಶಾಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ ನಡೆಸಲಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com