ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ: ಡಾ| ಆಳ್ವ


ಬೈಂದೂರು: ಆಳ್ವಾಸ್ ನುಡಿಸಿರಿ ವಿರಾಸತ್ ಜಗತ್ತಿನ ನಾನಾ ಭಾಗದ ಜನರಿಗೆ ತನ್ನ ಸಾಂಸ್ಕೃತಿಕ ವೈಭವವನ್ನು ಉಣ ಬಡಿಸುವುದರ ಮೂಲಕ ಜಗತ್ತಿನಲ್ಲಿ ಮನ್ನಣೆ ಪಡೆದ ಹೆಗ್ಗಳಿಕೆ ಹೊಂದಿದೆ. ಸಾಂಸ್ಕೃತಿಕ ಕಾರ್ಯಕ್ರಮ ಭಾಷೆ, ಸಾಹಿತ್ಯ, ಧರ್ಮಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. 

ಶನಿವಾರ ಸಂಜೆ ಇಲ್ಲಿನ ಗಾಂಧಿ ಮೈದಾ ನದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಬೈಂದೂರು ಘಟಕದ ವತಿಯಿಂದ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. 
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕಷ್ಣಪ್ರಸಾದ ಅಡ್ಯಂತಾಯ, ಬೈಂದೂರು ಹೋಲಿಕ್ರಾಸ್ ಚರ್ಚಿನ ಧರ್ಮಗುರು ಫಾ.ರೋನಾಲ್ಡ್ ಮಿರಾಂದ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಗನ್ನಾಥ ಶೆಟ್ಟಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀರಾಮ ಸೌಹಾರ್ದ ಕೋ-ಆಪ್ ಅಧ್ಯಕ್ಷ ರಾಜು ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ರಘುರಾಮ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿಗಳಾದ ಬಿ.ಅಣ್ಣಪ್ಪ ಖಾರ್ವಿ, ಜಯಾನಂದ ಹೋಬಳಿದಾರ್, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಗುತ್ತಿಗೆದಾರರಾದ ಜಿ. ಗೋಕುಲ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್ ಮಾಲಕ ಬಿ.ಎಸ್. ಸುರೇಶ ಶೆಟ್ಟಿ, ಶ್ರೀವದ್ಧಿ ಸೌಹಾರ್ದ ಕೋ-ಆಪ್ ಅಧ್ಯಕ್ಷ ಗುರುರಾಜ ಶೆಟ್ಟಿ, ಸಿನಿಯರ್ ಸಿಟಿಜನ್ ಕ್ಲಬ್ ಅಧ್ಯಕ್ಷ ವಸಂತ ಹೆಗ್ಡೆ, ಉದ್ಯಮಿಗಳಾದ ದಿವಾಕರ ಶೆಟ್ಟಿ, ಸದಾಶಿವ ಡಿ. ಪಡುವರಿ, ರಾಮು ಮೇಸ್ತ, ನಿತಿನ್ ಬಿ. ಶೆಟ್ಟಿ, ಸಂತೋಷ್ ಕುಮಾರ ಶೆಟ್ಟಿ, ವೆಂಕಟ್ರಮಣ ಬಿಜೂರು, ಜೈಸನ್ ಎಂ.ಡಿ., ನೀಲಕಂಠ ಹುದಾರ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಹುದಾರ್, ಮಾನವ ಜಾಗತಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ಮುಖ್ಯ ಶಿಕ್ಷಕ ಕಷ್ಣಪ್ಪ ಶೆಟ್ಟಿ, ವಿರಾಸತ್ ಘಟಕದ ಗೌರವಾಧ್ಯಕ್ಷ ಓಂ ಗಣೇಶ ಉಪ್ಪುಂದ, ಅಧ್ಯಕ್ಷ ಸುಧಾಕರ ಪಿ ಉಪಸ್ಥಿತರಿದ್ದರು.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com