ಕುಂದಾಪುರದಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಅನಾವರಣ

ಕುಂದಾಪುರ: ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಅರಿವು ಮೂಡಿಸ ಬೇಕಾದ ಅಗತ್ಯ ಇದೆ. ನಮ್ಮ ಬಾಷೆ- ಸಂಸ್ಕೃತಿಯನ್ನು ಪ್ರೀತಿಸುವ ಜೊತೆಗೆ ಪ್ರತಿಯೊಬ್ಬರಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಬೇಕಾಗಿದೆ. ಇದರಿಂದಾಗಿ ನಮ್ಮ ಸಂಸ್ಕೃತಿ, ಭಾಷೆ ಉಳಿಯಲು ಸಾಧ್ಯ ಎಂದು ಮೂಡುಬಿದ್ರೆ ಆಳ್ವಾಸ್‌ ಫೌಂಡೇಶನ್ ನ  ಅಧ್ಯಕ್ಷ ಡಾ|ಎಂ.ಮೋಹನ ಆಳ್ವ ಹೇಳಿದರು.
ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ ಮೈದಾನದಲ್ಲಿ ಆಳ್ವಾಸ್‌ ನುಡಿಸಿರಿ ವಿರಾಸತ್‌ ಕುಂದಾಪುರ ತಾಲೂಕು ಘಟಕ  ಹಮ್ಮಿಕೊಂಡ  ಆಳ್ವಾಸ್‌ ಸಾಂಸ್ಕೃತಿಕ ವೈಭವ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಕುಂದಾಪುರ ಹೋಲಿ ರೋಜರಿ  ಇಗರ್ಜಿಯ ಧರ್ಮಗುರು ರೇ|ಫಾ|ಅನಿಲ್‌ ಡೇಸಾ  ಸಾಂಸ್ಕೃತಿಕ  ವೈಭವದ ಮಹತ್ವ ಹಾಗೂ  ಇದರಿಂದ ಆಗುವ ಔಚಿತ್ಯದ ಬಗ್ಗೆ ಮಾತನಾಡಿದರು., ಆಳ್ವಾಸ್‌ ನುಡಿಸಿರಿ ಕುಂದಾಪುರ ಘಟಕದ ಅಧ್ಯಕ್ಷ ಡಾ|ಉಮೇಶ್‌ ಪುತ್ರನ್‌ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆಯ ಅಧ್ಯಕ್ಷ ಕಲಾವತಿ ಯು.ಎಸ್‌., ಪುರಸಭೆಯ ಮಾಜಿ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ಕುಂದಾಪುರ ಕಲಾಕ್ಷೇತ್ರ ಸಂಸ್ಥೆಯ ಕಿಶೋರ್‌ ಕುಮಾರ್‌, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಧರ್ಮಸ್ಥಳ  ಗ್ರಾಮಾಭಿವೃದ್ದಿ ಯೋಜನೆಯ ಕುಂದಾಪುರದ ಯೋಜನಾಧಿಕಾರಿ ಅಮರ್‌ಪ್ರಸಾದ್‌ ಶೆಟ್ಟಿ, ರೋಟರಿ ಸಹಾಯಕ ಗವರ್ನರ್‌ ಮೊಳಹಳ್ಳಿ ಗಣೇಶ್‌ ಶೆಟ್ಟಿ,  ಡಾ| ಸತೀಶ್‌ ಪೂಜಾರಿ, ಉದ್ಯಮಿ ಕೋಟ ಇಬ್ರಾಹಿಂ ಸಾಹೇಬ್‌, ಅರುಣ್‌ ಕುಮಾರ್‌ ಶೆಟ್ಟಿ, ಜಿ.ದತ್ತಾನಂದ, ಡಾ|ಮೋಹನ ಕಾಮತ್‌, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಬಿ.ಶೆಟ್ಟಿ,  ಉಪಸ್ಥಿತರಿದ್ದರು.

ನುಡಿಸಿರಿ ತಾಲೂಕು ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com