ಮಹಿಳಾ ಆತ್ಮರಕ್ಷಣಾ ತಂತ್ರ; ಪ್ರಾತ್ಯಕ್ಷಿಕೆ, ಸಂವಾದ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ಮಹಿಳಾ ಆತ್ಮರಕ್ಷಣೆ ತಂತ್ರಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಸಂವಾದ  ಕಾರ್ಯಕ್ರಮ ನಡೆಯಿತು.
  ಮಂಗಳೂರಿನ ಮಾರ್ಷಲ್‌ ಕಲಾವಿದ ಕಾರ್ತಿಕ್‌ ಎಸ್‌. ಕಟೀಲು ಅವರು ಮಹಿಳಾ ಸುರಕ್ಷಾ  ತಂತ್ರಗಳನ್ನು ವಿದ್ಯಾರ್ಥಿನಿಯ ರಿಗೆ ತಿಳಿಸಿದರು.
    ಮಹಿಳಾ ದೌರ್ಜನ್ಯವಾದಾಗ ಯಾವ ಯಾವ ಸುಲಭ ಸ್ವ ಸುರಕ್ಷತಾ ತಂತ್ರಗಳ ಮೂಲಕ ದೌರ್ಜನ್ಯ ಮಾಡಿದವರನ್ನು ಮಟ್ಟ ಹಾಕುವ ಮಾರ್ಗಗಳನ್ನು ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆೆÛಯದಲ್ಲ. ರಾತ್ರಿ ತಿರುಗಾಟವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.  ತಂದೆ ತಾಯಿಯರಿಗೆ ಸರಿಯಾದ ಮಾಹಿತಿಯನ್ನು ಒದಗಿಸುವುದು ಅಗತ್ಯ.    ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳ‌ಗಾಗಬಾರದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸುರಕ್ಷಾ ತಂತ್ರಗಳನ್ನು ಉಪಯೋಗಿಸಿ ನಿಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
    ಕಾರ್ತಿಕ್‌ ಎಸ್‌. ಕಟೀಲು ಇವರ ತಾಯಿ ಶೋಭಲತಾ ಸಹ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಂಗ್ಲ ವಿಭಾಗದ ಪ್ರಾಧ್ಯಾಪಕ ಡಾ| ಹಯವದನ ಉಪಾಧ್ಯಾಯ ಪ್ರಾಸ್ತಾವಿ ಕವಾಗಿ ಮಾತುಗಳನ್ನಾಡಿ, ಸ್ವಾಗತಿಸಿದರು.
     ಮಹಿಳಾ ವೇದಿಕೆ ಸಂಯೋಜಕರಾದ ಡಾ| ಯಶವಂತಿ ಕೆ. ಮತ್ತು ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com