ಮಾ.7ಕ್ಕೆ ಬೈಂದೂರು ಪ್ರೀಮಿಯರ್ ಲೀಗ್

ಬೈಂದೂರು: ಇಲ್ಲಿನ ಗಾಂಧಿ ಮೈದಾನದಲ್ಲಿ 60 ಗಜಗಳ ಐಪಿಎಲ್ ಮಾದರಿಯ ಬೈಂದೂರು ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾಟ ಮಾರ್ಚ್ 7 ಮತ್ತು 8ರಂದು ಜರುಗಲಿದೆ.
     ಬಿಪಿಎಲ್ ಪಂದ್ಯಾಟವನ್ನು ಮಾಚ್ 7ರ ಬೆಳಿಗ್ಗೆ ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಬೈಂದೂರು ಕ್ಷೇತ್ರದ ಶಾಸಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಂಗಳೂರು ಉತ್ತರದ ಶಾಸಕ ಮೊಯಿದಿನ್ ಬಾವಾ ಟ್ರೋಪಿ ಅನಾವರಣಗೊಳಿಸಿದರೆ, ಭಟ್ಕಳ ಶಾಸಕ ಮಾಂಕಾಳ ವೈದ್ಯ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಜಿ.ಪಂ ಅಧ್ಯಕ್ಷ ಎಸ್. ರಾಜು ಪೂಜಾರಿ ಬಿಪಿಎಲ್ ಧ್ವಜಾರೋಹಣಗೈಯಲಿದ್ದು, ಜಿ.ಪಂ. ಸದಸ್ಯ ಬಾಬು ಹೆಗ್ಡೆ ಶುಭಾಶಂಸನೆಗೈಯಲಿದ್ದಾರೆ. ವಿವಿಧ ಕ್ಷೇತ್ರಗಳ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ರಿಶಾಂಕ್ ದೇವಾಡಿಗರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು.
    ಮರುದಿನ ಸಂಜೆ ನಡೆಯುವ ಸಮಾರೋಪದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮವಾಗಿ 40,001, 20,001, 10,001 ಹಾಗೂ ಫಲಕ, ಫೈರ್ ಪ್ಲೆ ಅವಾರ್ಡ್, ಪ್ರತಿ ತಂಡ ಮತ್ತು ಆಟಗಾರರಿಗೆ ವೈಯಕ್ತಿಕ ಬಹುಮಾನವಿರುತ್ತಿದೆ.
      ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಪಂದ್ಯಾಟದಲ್ಲಿ ಬೈಂದೂರು ಕ್ಷೇತ್ರದ 16 ಪ್ರತಿಷ್ಠಿತ ತಂಡಗಳು ಭಾಗವಹಿಸುತ್ತಿದ್ದು, ಗಾಂಧಿ ಮೈದಾನದಲ್ಲಿ ಪ್ರೇಕ್ಷಕರ ಗ್ಯಾಲರಿ, ಆಕರ್ಷಕ ಟ್ಯಾಬ್ಲೋ, ನಾಸಿಕ್ ಬ್ಯಾಂಡ್, ಪ್ರತಿಷ್ಠಿತ ನೃತ್ಯ ತಂಡಗಳಿಂದ ಚಿಯರ್ ಲೀಡಿಂಗ್ ನೃತ್ಯ,  ಮುಂತಾದ ವಿಶೇಷತೆಗಳೊಂದಿಗೆ ನಡೆಯಲಿದೆ ಎಂದು ಬೈಂದೂರು ಪ್ರೀಮಿಯರ್ ಲೀಗ್ ನ ಅಧ್ಯಕ್ಷ ಎಸ್. ಮಣಿಕಂಠ ದೇವಾಡಿಗ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com