​ನಾಗದೇವರಿಗೆ ವಿಶೇಷ ಸ್ಥಾನ: ಸುಬ್ರಹ್ಮಣ್ಯ ಶ್ರೀ

ಬಸ್ರೂರು : ನಾಗದೇವತೆಗೆ ದೇವತೆಗಳಲ್ಲಿಯೇ ವಿಶೇಷ ಸ್ಥಾನವಿದೆ. ಭೂಮಂಡಲದಲ್ಲಿ ನಾಗಮಂಡಲದಂತಹ ಧಾರ್ಮಿಕ ಪೂಜೆ ನಡೆದಾಗ ಭೂಮಿ ಫಲಭರಿತವಾಗುತ್ತದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ  ನಾಗದೇವರಿಗೆ ವಿಶಿಷ್ಟವಾದ ಸ್ಥಾನವಿದೆ. ಜನರು ಧರ್ಮವನ್ನು ಕಾಪಾಡಿದಾಗ  ಧರ್ಮ ಜನರನ್ನು ಕಾಪಾಡುತ್ತದೆ. ಈ ಭಕ್ತಿಯ ಪರಂಪರೆ ಮುಂದಿನ ಜನಾಂಗಕ್ಕೂ ತಲುಪಬೇಕಾದ ಹೊಣೆಗಾರಿಕೆ  ನಮ್ಮ ಮೇಲಿದೆ. ನಾಗಮಂಡಲದ ಸೇವಾಕರ್ತರ, ಭಕ್ತರ ಅಭಿಷ್ಟೆ ಈಡೇರುತ್ತದೆ ಎಂದು  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು  ನುಡಿದರು.

ಅವರು ಬುಧವಾರ ಕುಂದಾಪುರ ತಾಲೂಕು ಬಳ್ಕೂರಿನ ಮೂರಾನೆಮರ ನಾಗಬೊಬ್ಬರ್ಯ ಸನ್ನಿಧಿಯಲ್ಲಿ   ಸುಶೀಲಾ, ವೆಂಕಟರಮಣ  ಹಾಗೂ ಅವರ ಪುತ್ರ  ನಾಗೇಶ್‌ ಶೇರಿಗಾರ್‌ ಅವರ ಸೇವಾರ್ಥವಾಗಿ  ನಡೆದ ಚತುಃಪವಿತ್ರ  ನಾಗಮಂಡಲೋತ್ಸವದ  ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ  ಧರ್ಮದರ್ಶಿ ಕೆ.ವಾಸುದೇವ ಆಸ್ರಣ್ಣ  ವಹಿಸಿದ್ದರು.  ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಆಡಳಿತ ಧರ್ಮದರ್ಶಿ  ಬಿ.ಅಪ್ಪಣ್ಣ ಹೆಗ್ಡೆ, ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌. ವಿ. ನರಸಿಂಹಮೂರ್ತಿ,  ವಿದ್ವಾನ್‌ ಪಂಜ ಭಾಸ್ಕರ ಭಟ್‌, ಸೇವಾಕರ್ತ ನಾಗೇಶ್‌ ಶೇರೆಗಾರ್‌ ದಂಪತಿ ಉಪಸ್ಥಿತರಿದ್ದರು.

ನವೀನ್‌ ಶೇರಿಗಾರ್‌ ಸ್ವಾಗತಿಸಿದರು. ಯು.ವೆಂಟಟ ರಮಣ  ಹೊಳ್ಳ ಕಾರ್ಯ ಕ್ರಮ ನಿರ್ವಹಿಸಿದರು. ನಿತಿನ್‌ ಅವರು ವಂದಿಸಿದರು. ಬಳಿಕ ಅನ್ನಸಂತರ್ಪಣೆ ಜರಗಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com