ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕೋಟೇಶ್ವರ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.22ರಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟೇಶ್ವರ ಘಟಕ, ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌  ಇವರ ನೇತೃತ್ವದಲ್ಲಿ   ತೆಕ್ಕಟ್ಟೆ ಫ್ರೆಂಡ್ಸ್‌, ಜೆಸಿಐ ಕುಂದಾಪುರ, ಜಿಲ್ಲಾಡಳಿತ ಉಡುಪಿ ಜಿಲ್ಲೆ, ರಕ್ತನಿಧಿ ಕೆ.ಎಂ.ಸಿ. ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ  ಸ್ವಯಂ ಪ್ರೇರಿತ ಬೃಹತ್‌ ರಕ್ತದಾನ ಶಿಬಿರ ನಡೆಯಿತು.
    ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್‌ ಹೇಳಿದರು ಉದ್ಘಾಟಿಸಿ  ಮಾತನಾಡಿದರು. ಸಭಾಧ್ಯಕ್ಷತೆಯನ್ನು  ವಹಿಸಿದ್ದ ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಕೋಟೇಶ್ವರ  ಘಟಕದ ಅಧ್ಯಕ್ಷ  ಅಶೋಕ್‌ ತೆಕ್ಕಟ್ಟೆ  ಅವರು  ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.
   ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸದಾನಂದ ಬಳ್ಕೂರು,ಕುಂದಾಪುರ ಜೆಸಿಐ ಅಧ್ಯಕ್ಷ ಚಂದ್ರ ಇಂಬಾಳಿ, ತೆಕ್ಕಟ್ಟೆ  ಫ್ರೆಂಡ್ಸ್‌  ಸಂಚಾಲಕ ಪ್ರಕಾಶ್‌ ಶೆಟ್ಟಿ,  ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಕಾರ್ಯದರ್ಶಿ ಯತೀಶ್‌ ಕಿದಿಯೂರು, ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಮಹಿಳಾ ಅಧ್ಯಕ್ಷೆ ಹೇಮಾ ತೆಕ್ಕಟ್ಟೆ, ಸ.ಮಾ.ಹಿ.ಪ್ರಾ.ಸಾಲೆಯ ಮುಖ್ಯ ಶಿಕ್ಷಕ ಸಂಜೀವ ಎಂ.ಪಿ.ಉಪಸ್ಥಿತರಿದ್ದರು.
   ಕೋಟೇಶ್ವರ ಮೊಗವೀರ ಯುವ ಸಂಘಟನೆಯ ಗೌರವಾಧ್ಯಕ್ಷ ಸತೀಶ್‌ ಎಂ.ನಾಯ್ಕ ಸ್ವಾಗತಿಸಿದರು. ಶಿವರಾಮ್‌ ಕೋಟ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಸುಮಾರು 180 ಯುನಿಟ್‌ ರಕ್ತ ಸಂಗ್ರಹಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com