ಬೈಂದೂರು-ಸೋಮೇಶ್ವರ ಬೀಚ್ ರಸ್ತೆಗೆ ಶಿಲಾನ್ಯಾಸ


ಬೈಂದೂರು: ಕಳೆದ 20 ತಿಂಗಳ ಅವಧಿಯಲಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ಅನುದಾನ ದೊರೆತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಪಡುವರಿ- ದೊಂಬೆ ರಸ್ತೆ 2 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿದೆ. ಬೈಂದೂರು ಪಟ್ಟಣ ವ್ಯಾಪ್ತಿಯ ಸಂಪೂರ್ಣ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗುವುದು. ಸುನಾಮಿ ನಿಧಿಯಿಂದ ಕ್ಷೇತ್ರಕ್ಕೆ ಅತ್ಯಧಿಕ ಅನುದಾನ ಪಡೆದು ಕರಾವಳಿ ಭಾಗಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆಯಾಗಲಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
   ಅವರು  ಬೈಂದೂರು ಪ್ರವಾಸೋದ್ಯಮ ಇಲಾಖೆಯ ನಬಾರ್ಡ್‌ ವತಿಯಿಂದ ಪಡುವರಿ ಬೀಚ್‌ ರಸ್ತೆಯ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು.
        ಈ ಸಂದರ್ಭದಲ್ಲಿ ಉಡುಪಿ ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯೆ ಸುಪ್ರೀತಾ ದೀಪಕ್‌ ಕುಮಾರ್‌ ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಚಂದ್ರಶೇಖರ, ಎಂಜಿನಿಯರ್‌ ಮಂಜು ನಾಥ, ತಾ.ಪಂ. ಸದಸ್ಯ ರಾಜು ಪೂಜಾರಿ, ಶ್ರೀಮತಿ ಮೊಗವೀರ, ರಾಮ ಬೈಂದೂರು, ರಮೇಶ ಗಾಣಿಗ ಕೊಲ್ಲೂರು, ರಾಜು ದೇವಾಡಿಗ, ಗ್ರಾ.ಪಂ. ಅಧ್ಯಕ್ಷರುಗಳಾದ ನಾಗರಾಜ್‌ ಶೆಟ್ಟಿ, ಸುರೇಶ್‌ ಬಟ್ವಾಡಿ, ಜನಾರ್ದನ, ಸುಬ್ಬ ಶೇರುಗಾರ್‌, ಸದಾಶಿವ ಡಿ., ನಾಗರಾಜ ಗಾಣಿಗ, ಮದನ್‌ ಕುಮಾರ್‌ ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com