ಫೆ 28: ಬೈಂದೂರಿನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ

ಬೈಂದೂರು: ಸಾಂಸ್ಕೃತಿಕ ಹಾಗೂ ಸೌಂದರ್ಯ ಪ್ರಜ್ಞೆಯನ್ನು ನಾಡಿನಾದ್ಯಂತ ಜೀವಂತವಾಗಿರಿಸಲು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಹಮ್ಮಿ ಕೊಂಡ ’ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಬೈಂದೂರು ಘಟಕದ ಆಶ್ರಯದಲ್ಲಿ ಫೆಬ್ರವರಿ 28ರಂದು ಜರುಗಲಿದೆ.
     ಶಾಸಕ ಶ್ರೀ ಕೆ ಗೋಪಾಲ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿಗಳೂ ಸಂಸದರೂ ಆದ ಶ್ರೀ ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಶ್ರೀ ಮೋಹನ್ ಆಳ್ವ ಹಾಗೂ ಸ್ಥಳಿಯ ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ಆರಂಭಗೊಳ್ಳಲಿದೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ಸಂಜೆ 5:30ರಿಂದ ಹಮ್ಮಿ ಕೊಂಡ ಈ ಉತ್ಸವದಲ್ಲಿ ಪ್ರಪ್ರಥಮ ಭಾರಿಗೆ 80 ಅಡಿ ಅಗಲದ ವೇದಿಕೆಯಲ್ಲಿ ಬೆರಗು ಮೂಡಿಸುವ ಬೆಳಕಿನ ವಿನ್ಯಾಸದಲ್ಲಿ 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಅಂತರ್ರಾಷ್ಟ್ರೀಯ ಗುಣಮಟ್ಟದ ನೃತ್ಯ ವೈಭವ ಜರುಗಲಿದೆ.

ಮಹರಾಷ್ಟ್ರದ ಲಾವಣಿ, ಶಾಸ್ರ್ತೀಯ ಶಂಬೋ, ತೆಂಕು ಯಕ್ಷಗಾನದ ಭ್ರಾಮರಿ ವಿಲಾಸ, ಪಂಜಾಬಿನ ಜಿದ್ವಾ ಬಾಂಗ್ಡಾ,ಆಂಧ್ರಾದ ಬಂಜಾರಾ , ಮಣಿಪುರಿಯ ದೋಲ್ ಚಲಮ್, ಸ್ಟೀಕ್, ಶ್ರೀಲಂಕಾದ ಕ್ಯಾಂಡಿಯನ್ ಇನ್ನೂ ಮೊದಲಾದ ನೃತ್ಯ ವೈವಿಧ್ಯದೊಂದಿಗೆ ವಿಶೇಷವಾಗಿ ಜೀವನ್ ರಾಮ್ ಸುಳ್ಯ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ನಾಟಕ ಬರ್ಬರೀಕ ಪ್ರದರ್ಶನಗೊಳ್ಳಲಿದೆ.

10ಸಾವಿರ ಪ್ರೇಕ್ಷಕರ ನಿರೀಕ್ಷೆಯಲ್ಲಿ ಸಿದ್ಧತೆ ನಡೆಸಲಾಗಿದ್ದು ಸರಿಯಾದ ಸಮಯಕ್ಕೆ ಆರಂಭವಾಗಿ 4 ಗಂಟೆಗಳಕಾಲ ಜರಗುವ ಈ ಸಮಾರಂಭಕ್ಕೆ ಎಲ್ಲಾ ಸಾಂಸ್ಕೃತಿಕ ಪ್ರಿಯರಿಗೂ ಉಚಿತ ಪ್ರವೇಶವಿದೆ ಎಂದು ಬೈಂದೂರು ಆಳ್ವಾಸ್ ಘಟಕದ ಗೌರವಾಧ್ಯಕ್ಷ ಓಂಗಣೇಶ್ ಹಾಗೂ ಅಧ್ಯಕ್ಷ ಪಿ ಸುಧಾಕರ ಉತ್ಸವ ಸಂಚಾಲಕ ದಿವಾಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com