ಮಠ ಮಂದಿರಗಳಿಂದ ಸ್ವಸ್ಥ ಸಮಾಜ: ಕೇಮಾರು ಶ್ರೀ

ಬೈಂದೂರು: ದೇವಾಲಯಗಳು, ಮಠ ಮಂದಿರ ಗಳು ಕೇವಲ ಕಟ್ಟಡ ವಿನ್ಯಾಸಕ್ಕೆ ಮಾತ್ರ ಸೀಮಿತವಲ್ಲ. ಕಲೆ, ಸಂಸ್ಕೃತಿ, ವೇದ, ಪುರಾಣ ಮುಂತಾದವುಗಳ ಪ್ರಸರಣದ ಶ್ರದ್ಧಾ ಕೇಂದ್ರವಾಗಿವೆ‌. ಮಠ ಮಂದಿರಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಉಪ್ಪುಂದ ಮಡಿಕಲ್‌ನ ಮಹಾಈಶ್ವರ ದೇವಳದ ನೂತನ ಶಿಲಾಮಯ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಅಣ್ಣಪ್ಪ ಖಾರ್ವಿ, ವಾಸ್ತುಶಿಲ್ಪಿ ಮಹೇಶ ಮುನಿಯಂಗಳ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಖಾರ್ವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎನ್‌. ಖಾರ್ವಿ, ವೆಂಕಟರಮಣ ಕುಂದರ್‌, ನಾಡದೋಣಿ ಮೀನಗಾರರ ಸಂಘದ ಅಧ್ಯಕ್ಷ ಕುಮಾರ ಖಾರ್ವಿ, ಚಂದ್ರ ಖಾರ್ವಿ, ಕೆ.ಮಂಜು ಪೂಜಾರಿ ಉಪಸ್ಥಿತರಿದ್ದರು.

ನವೀನಚಂದ್ರ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ರತ್ನಾಕರ ಖಾರ್ವಿ ಸ್ವಾಗತಿಸಿದರು. ತಾ.ಪಂ. ಸದಸ್ಯ ಪ್ರಸನ್ನ ಕುಮಾರ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com