ದೇವಾಡಿಗ ಸಂಘದ ವಾರ್ಷಿಕ ಮಹಾಸಭೆ

ಕುಂದಾಪುರ: ನಮ್ಮ ಮಕ್ಕಳಿಗೆ ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಮುಂಬಯಿ ಉದ್ಯಮಿ ಸುರೇಶ್ ಡಿ.ಪಡುಕೋಣೆ ಹೇಳಿದರು. 

ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ವಾಸು ದೇವಾಡಿಗ, ಪುಣೆ ಉದ್ಯಮಿ ಬಾರ್ಕೂರು ಅಣ್ಣಯ್ಯ ಶೇರಿಗಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಮೊಯ್ಲಿ, ಏಕನಾಥೇಶ್ವರಿ ದೇವಸ್ಥಾನದ ಪ್ರಚಾರ ಸಮಿತಿ ಕಾರ್ಯದರ್ಶಿ ಜನಾರ್ದನ ದೇವಾಡಿಗ, ಕೋಟೇಶ್ವರ ದೇವಾಡಿಗರ ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ, ಬೈಂದೂರು ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ಚಿತ್ತರಂಜನ್, ಕುಮಾರ ದೇವಾಡಿಗ, ಸಂಸ್ಥೆಯ ಗೌರವಾಧ್ಯಕ್ಷ ದತ್ತಾತ್ರೇಯ ದೇವಾಡಿಗ, ಗಣೇಶ್ ಕೆ., ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಜಗನ್ನಾಥ, ಉದಯ ಹೇರಿಕೆರೆ, ಉದಯ ಡಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಆಲೂರು ರಘುರಾಮ ದೇವಾಡಿಗ, ಉಡುಪಿ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ದೇವಾಡಿಗ, ಯಕ್ಷಗಾನ ತಾಳಮದ್ದಳೆ ಕಲಾವಿದ ಶ್ರೀಧರ ಭಂಡಾರಿ ಕಮಲಶಿಲೆ, ವಾದ್ಯಕಲಾವಿದರಾದ ಕೊರಗ ದೇವಾಡಿಗ, ಅಂತರಾಷ್ಟ್ರೀಯ ಪವರ್ ಲಿಪ್ಟರ್ ಸುರೇಶ್ ಪಡುಕೋಣೆ, ಹಿರಿಯರ ವಿಭಾಗದ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಕಷ್ಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಅನಿತಾ ವರದಿ ವಾಚಿಸಿದರು. ಜಯರಾಮ ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕ ರಾಮ ದೇವಾಡಿಗ ಮತ್ತು ಪತ್ರಕರ್ತ ನಾಗರಾಜ ರಾಯಪ್ಪನಮಠ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com