ಉಡುಪಿ-ಕುಂದಾಪುರ ಫ್ಯಾಶನ್ ಕೋರ್ಟ್ : ಲಕ್ಕಿ ಡ್ರಾ ಬಹುಮಾನ ವಿತರಣೆ

ಕುಂದಾಪುರ: ವ್ಯವಹಾರದ ಲಾಭದ ಒಂದಂಶವನ್ನು ಗ್ರಾಹಕರಿಗೆ ಬಹುಮಾನ ಯೋಜನೆಯ ಮೂಲಕ ಮೌಲ್ಯಯುತವಾದ ಕೊಡುಗೆಯನ್ನು ನೀಡುತ್ತಿರುವ ಫ್ಯಾಶನ್ ಕೋರ್ಟ್‌ನ ಕಾರ್ಯ ಪ್ರಶಸಂಸನೀಯ, ಹೀಗೆ ಗ್ರಾಹಕರೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿ ಉದ್ಯಮ ಪ್ರಗತಿ ಪಥದಲ್ಲಿ ಸಾಗಲಿ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
    ಅವರು  ಉಡುಪಿ ಹಾಗೂ ಕುಂದಾಪುರದ ಹೆಸರಾಂತ ಜವುಳಿ ಮಳಿಗೆ ಫ್ಯಾಶನ್ ಕೋರ್ಟ್ ಹಮ್ಮಿಕೊಂಡ ವಿಶೇಷ ಮಾರಾಟ ಯೋಜನೆಯ ಅಂಗವಾಗಿ ಲಕ್ಕಿ ಡ್ರಾ ವಿಜೇತರುಗಳಿಗೆ ಬಹುಮಾನ ಹಸ್ತಾಂತರಿಸಿ, ವಿಜೇತರುಗಳನ್ನು ಅಭಿನಂಧಿಸಿ ಮಾತನಾಡಿದರು.
    ಫ್ಯಾಶನ್ ಕೋರ್ಟ್ ತನ್ನ ಗ್ರಾಹಕರಿಗೆ ಪ್ರತಿ 1 ಸಾವಿರ ಖರೀದಿಯ ಮೇಲೆ ಲಕ್ಕಿ ಕೂಪನ್ ನೀಡಿದ್ದು, ಅದರ ಪ್ರಥಮ ಬಹುಮಾನ ಎಲ್‌ಇಡಿ ಟಿ.ವಿಯನ್ನು ಉಡುಪಿ ಕುಂಜಿಬೆಟ್ಟು ಗುಂಡಿಬೈಲಿನ ರತ್ನಾ ಅವರು ಪಡೆದುಕೊಂಡರು. ದ್ವಿತೀಯ ಬಹುಮಾನ ಫ್ರಿಡ್ಜ್‌ನ್ನು ಕುಂದಾಪುರ ತಾಲೂಕಿನ ಉಪ್ಪುಂದದ ಬಿ. ಕುಮಾರ್, ತೃತೀಯ ಬಹುಮಾನ ವಾಷಿಂಗ್ ಮೆಷಿನ್‌ನ್ನು ಉಡುಪಿ ತಾಲೂಕಿನ ಸಾಸ್ತಾನ ಯಡಬೆಟ್ಟುವಿನ ನಾಗರತ್ನಾ ಅವರು ಪಡೆದುಕೊಂಡರು. 
    ಫ್ಯಾಶನ್ ಕೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕೆ. ಕಾರ್ತಿಕೇಯ ಮಧ್ಯಸ್ಥ ಸ್ವಾಗತಿಸಿ, ಬಹುಮಾನ ಯೋಜನೆಯ ಮಾಹಿತಿ ನೀಡಿದರು. ನಿರ್ದೇಶಕರುಗಳಾದ ತನುಜಾ ಗಿರೀಶ್ ಐತಾಳ್, ಶಿಲ್ಪಾ ಕಾರ್ತಿಕೇಯ ಮಧ್ಯಸ್ಥ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಚಂದ್ರಕಾಂತ ವಂದಿಸಿದರು. ಸಂತೋಷ್ ಅಡ್ವರ್‌ಟೈಸಿಂಗ್‌ನ ಮಾಲಕ ಸಂತೋಷ ಕೋಣಿ ಕಾರ್ಯಕ್ರಮ ನಿರ್ವಹಿಸಿದರು.
Fashion Court Kundapura and udupi
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com