ಕುಂದಾಪುರದಲ್ಲಿ ಗಾನ ಕೋಗಿಲೆಗೆ ಅಭಿನಂದನೆ; ಖ್ಯಾತ ಗಾಯಕರಿಂದ ಸಂಗೀತದರ್ಪಣೆ

ಕುಂದಾಪುರ: ಕೋಟೇಶ್ವರದ ಯುವ ಮೆರಿಡಿಯನ್‌ನ ಒಪೆರಾ ಪಾರ್ಕ್‌ನಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಖ್ಯಾತ ಗಾಯಕಿ ಎಸ್. ಜಾನಕಿಯವರನ್ನು ಅಭಿನಂದಿಸುವ ಸಮಾರಂಭಕ್ಕೆ ಅವರ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.
     ಕುಂದಾಪುರದ ಡಾ| ಎಸ್. ಜಾನಕಿ ಅಭಿನಂದನಾ ಸಮಿತಿಯು ಪ್ರಥಮ್ ಇನ್ & ರೆಸಾರ್ಟ್ಸ್ ಜಪ್ತಿ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಗಾನ ಕೋಗಿಲೆಗೆ ನಾದ ನಮನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿರೂರುಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ಎಸ್. ಜಾನಕಿಯವರನ್ನು ಅಭಿನಂದಿಸಿ ಮಾತನಾಡಿ ಹದಿನೇಳಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಜಾನಕಿಯವರು ವಿಶ್ವದ ಕೋಗಿಲೆ. ಅವರ ಸಂಗೀತ ಚಿರಸ್ಥಾಯಿಯಾಗಿ ಉಳಿಯಲಿ ಎಂದು ಹಾರೈಸಿದರು.


   ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ| ಎಸ್. ಜಾನಕಿ ಅಭಿನಂದನಾ ಸಮಾರಂಭ ತನನ್ನು ಮಂತ್ರಮುಗ್ಧರನ್ನಾಗಿದೆ. ಇಲ್ಲಿನ ಜನರ ಅಭಿಮಾನಕ್ಕೆ ಕೃತಜ್ಞಳಾಗಿದ್ದೆನೆ. ಸಂಗೀತ ರಸಸಂಜೆಯಲ್ಲಿ ಮಕ್ಕಳು (ಹಾಡುಗಾರರು) ಚನ್ನಾಗಿ ಹಾಡಿದ್ದಾರೆ. ಅವರ ಸಂಗೀತ ಪರಿಕರಗಳನ್ನು ನುಡಿಸುವವರು ಹಾಗೂ ಧ್ವನಿವರ್ದಕದವರು ಉತ್ತಮ ಸಾಥ್ ನೀಡಿದ್ದಾರೆ ಅವರೆಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
    ಸಮಾರಂಭದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಹಟ್ಟಿಯಂಗಡಿ ದೇವಳದ ರಾಮಚಂದ್ರ ಭಟ್, ಉದ್ಯಮಿ ಎನ್. ಟಿ . ಪೂಜಾರಿ, ಯುವ ಮೇರಿಡಿಯನ್ ನ ಸಹೋದರರಾದ ಉದಯ ಕುಮಾರ್ ಶೆಟ್ಟಿ ಮತ್ತು ವಿನಯಕುಮಾರ್ ಶೆಟ್ಟಿ, ಡಾ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
     ಡಾ| ಪ್ರಕಾಶ್ ತೋಳಾರ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
     ಸಭಾ ಕಾರ್ಯಕ್ರಮದ ಮೊದಲು ಹಾಗೂ ನಂತರ ಡಾ| ಸತೀಶ್ ಪೂಜಾರಿ ನೆತೃತ್ವದಲ್ಲಿ  ಡಾ| ಎಸ್. ಜಾನಕಿಯವರ 24 ಸುಪ್ರಸಿದ್ಧ ಕನ್ನಡ ಚಿತ್ರಗೀತೆಗಳನ್ನು ಕರ್ನಾಟಕ ಕರಾವಳಿಯ ಪ್ರಸಿದ್ಧ ಗಾಯಕರುಗಳು ಸಾದರಪಡಿಸಿದರು. ಅಭಿನಂದನಾ ಸಮಾರಂಭದ ಬಳಿಕ ಇಳಿ ವಯಸ್ಸಿನ ಡಾ| ಎಸ್. ಜಾನಕಿಯವರೂ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.  ಆರ್.ಜೆ ಪ್ರಸನ್ನ ಹಾಗೂ ಆರ್.ಜೆ. ನಯನಾ ನಿರೂಪಿಸಿದರುಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com