ಶಾಂತಿ ಸಮಾಲೋಚನಾ ಸಭೆ

ಗಂಗೊಳ್ಳಿ: ಗ್ರಾಪಂ ವ್ಯಾಪ್ತಿಯ ಸದ್ಭಾವನಾ ಸಮಿತಿ ಹಾಗೂ ಕುಂದಾಪುರ ತಾಲೂಕು ಸದ್ಭಾವನಾ ವೇದಿಕೆ ಇವರ ಸಹಯೋಗದೊಂದಿಗೆ ಗಂಗೊಳ್ಳಿಯಲ್ಲಿ ಸರ್ವ ಧರ್ಮಿಯರ ಶಾಂತಿ ಸಮಾಲೋಚನಾ ಸಭೆ ಮಂಗಳವಾರ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. 

ಗಂಗೊಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಸರ್ವಧರ್ಮಿಯ ಮುಖಂಡರು ಸಮಾಲೋಚನೆ ನಡೆಸಿದರು. 

ಗಂಗೊಳ್ಳಿಯಲ್ಲಿ ಶಾಂತಿ ಸುವವ್ಯಸ್ಥೆ ಕಾಪಾಡಲು ಎಲ್ಲಾ ಧರ್ಮಗಳ ಸಜ್ಜನರು ಶ್ರಮಿಸುವಂತೆ ಹಾಗೂ ಯಾವುದೇ ಘಟನೆ ನಡೆದ ಸಂದರ್ಭ ಸಭೆ ಸೇರಿ ಘಟನೆಯ ಬಗ್ಗೆ ಪರಾಮರ್ಶಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗಂಗೊಳ್ಳಿಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಮಾ.1 ರಂದು ಸಭೆ ಸೇರಲು ಹಾಗೂ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಗಂಗೊಳ್ಳಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ತುರ್ತು ಕ್ರಮಗಳ ಬಗ್ಗೆ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. 

ಗಂಗೊಳ್ಳಿ ಚರ್ಚಿನ ಧರ್ಮಗುರು ರೆ.ಫಾ. ಅಲ್ಫೋನ್ಸ್ ಡಿಲೀಮಾ, ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಸಮಾಜ ಸೇವಕ ಜಿ.ಗಣಪತಿ ಶಿಪಾ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಡಾ.ಕಾಶೀನಾಥ ಪೈ, ಜೋನ್ ಲೋಬೊ, ಕೆ.ಯೂನಿಸ್ ಸಾಹೇಬ್, ಬಿ.ರಾಘವೇಂದ್ರ ಪೈ, ಜೆರಾಲ್ಡ್ ಕ್ರಾಸ್ತಾ, ದಿವಾಕರ ಖಾರ್ವಿ, ಖಾಜಿ ಅಬ್ದುಲ್ ಬಾಸಿತ್ ಮೊದಲಾದವರು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಸರ್ವಧರ್ಮಿಯ ಮುಖಂಡರು ನೀಡಿದ ಸಲಹೆ ಸೂಚನೆಗಳ ಬಗ್ಗೆ ಸದ್ಭಾವನಾ ವೇದಿಕೆಯ ದಾಮೋದರ ಆಚಾರ್ಯ ಸಹಮತ ವ್ಯಕ್ತಪಡಿಸಿ ಗಂಗೊಳ್ಳಿಯಲ್ಲಿ ಶಾಂತಿ ಕಾಪಾಡಲು ಎಲ್ಲರೂ ಒಂದಾಗಿ ಶ್ರಮಿಸುವಂತೆ ಕರೆ ನೀಡಿದರು. ಸಿಡಬ್ಲ್ಯುಸಿಯ ಶ್ರೀನಿವಾಸ ಗಾಣಿಗ, ಅರುಣಾಚಲ ಮಯ್ಯ, ಪ್ರಭಾಕರ ಹಾಗೂ ಸರ್ವಧರ್ಮಿಯ ಮುಖಂಡರು ಉಪಸ್ಥಿತರಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com