ಗಂಗೊಳ್ಳಿಯಲ್ಲಿ ವಿದ್ಯಾರ್ಥಿ ವೈಭವ

ಗಂಗೊಳ್ಳಿ: ಇಂದಿನ ಯುವ ಶಕ್ತಿಯಲ್ಲಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಶಕ್ತಿಯನ್ನು ಗುರುತಿಸುವ ಹಾಗೂ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಬೇಕಾಗಿದೆ. ವಿದ್ಯಾರ್ಥಿಗಳು ಯಾವುದೇ ಕೀಳರಿಮೆಯನ್ನು ಇಟ್ಟು ಕೊಳ್ಳದೆ ಉತ್ತಮ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ಸಾಧಿಸುವ, ಗುರಿ ಮುಟ್ಟುವ ಹಠ. ಹಂಬಲ ಇದ್ದರೆ ಮಾತ್ರ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ವೇದಮೂರ್ತಿ ನಾರಾಯಣ ಭಟ್‌ ರೇಂಜಾಳ್‌ ಹೇಳಿದರು.
ಅವರು   ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಶ್ರೀ ಸಿಗಂಧೂರೇಶ್ವರಿ ಡಾನ್ಸ್‌ ಅಕಾಡೆಮಿ ಗಂಗೊಳ್ಳಿ ಹಾಗೂ ಚೈತನ್ಯ ಯುವಕ ಸಂಘ ಜಪ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿದ್ಯಾರ್ಥಿ ವೈಭವ 2015 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಆರ್‌. ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ ಕುಂದಾಪುರ ಮಿಡ್‌ಟೌನ್‌ ಅಧ್ಯಕ್ಷ ಅಬ್ದುಲ್‌ ಬಶೀರ್‌ ಕೋಟ, ಗಂಗೊಳ್ಳಿಯ ಉದ್ಯಮಿ ಉಪೇಂದ್ರ ಪೂಜಾರಿ, ಗಂಗೊಳ್ಳಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ, ಗಂಗೊಳ್ಳಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿಲೀಪ್‌ ಎನ್‌. ಖಾರ್ವಿ, ಗಂಗೊಳ್ಳಿ ಅಂಜುಮಾನ್‌ ಸಂಸ್ಥೆಯ ಸಂಚಾಲಕ ಮಂಝೂರ್‌ ನಾಕುದಾ,  ಶ್ರೀ ಸಿಗಂಧೂರೇಶ್ವರಿ ಡಾನ್ಸ್‌ ಅಕಾಡೆಮಿಯ ಸಂಚಾಲಕ ಗೋಪಾಲ ಚಂದನ್‌, ಅಧ್ಯಕ್ಷ ಅನೀಶ್‌ ಜಪ್ತಿ, ಚೈತನ್ಯ ಯುವಕ ಸಂಘದ ಅಧ್ಯಕ್ಷ ನಾಗರಾಜ್‌ ಜಪ್ತಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಸಿಗಂಧೂರೇಶ್ವರಿ ಡಾನ್ಸ್‌ ಅಕಾಡೆಮಿ ಕಾರ್ಯದರ್ಶಿ ಸತೀಶ ಜಿ. ಸ್ವಾಗತಿಸಿ, ಉಪಾ ಧ್ಯಕ್ಷೆ ಡಾ| ವೀಣಾ ಕಾರಂತ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಖಾರ್ವಿ ಜಿಎಫ್‌ಸಿಎಸ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com