ಶ್ರೀ ಜಟ್ಟಿಗೇಶ್ವರ ಯುತ್‌ ಕ್ಲಬ್‌ನ ವಾರ್ಷಿಕೋತ್ಸವ

ಗಂಗೊಳ್ಳಿ: ಇಲ್ಲಿನ ಲೈಟ್‌ಹೌಸ್‌  ಬಳಿಯ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಶ್ರೀ ಜಟ್ಟಿಗೇಶ್ವರ ಯುತ್‌ ಕ್ಲಬ್‌ನ ವಾರ್ಷಿಕೋತ್ಸವ ಇತ್ತಿಚಿಗೆ ಜರುಗಿತು
   ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಸಾಹಿತಿ ಕೋ.ಶಿವಾನಂದ ಕಾರಂತ, ಭಯೋತ್ಪಾದನೆ ಇಂದು ದೇಶವನ್ನು ಕಾಡುತ್ತಿದ್ದು, ದೇಶದ ಯುವಶಕ್ತಿ ಈ ಪಿಡುಗನ್ನು ತೊಡೆದು ಹಾಕುವಲ್ಲಿ ಪ್ರಯತ್ನಿಸಬೇಕು. ನಮ್ಮ ಯುವಜನತೆ ಜೀವನದಲ್ಲಿ ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನ ಬೆಳೆಸಿಕೊಂಡು ಸುಭ್ರದ್ರ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಯುವಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶರಾಗಬೇಕು ಎಂದು  ಹೇಳಿದರು.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ವೆಂಕಟೇಶ ಕೆ. ಎಡಳ್ಳಿ ಶುಭ ಹಾರೈಸಿದರು.  ರಾಷ್ಟ್ರ  ಮಟ್ಟದ ಟೆನ್ನಿಕಾಯಯ್ಡ್ ಆಟಗಾರ ಆಕಾಶ ಖಾರ್ವಿ ಅವರನ್ನು ಸಮ್ಮಾನಿಸಲಾಯಿತು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ, ಇನ್ಸುರೇನ್ಸ್‌ ಸರ್ವೇಯರ್‌ ಜ್ಞಾನದಾಸ ಕಾನೋಜಿ, ಸಂಘದ ಅಧ್ಯಕ್ಷ ಎಂ.ಭಾಸ್ಕರ ಖಾರ್ವಿ, ಕಾರ್ಯದರ್ಶಿ ಮಡಿ ಉದಯ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಮಡಿ ಮಾಧವ ಖಾರ್ವಿ ಸ್ವಾಗತಿಸಿ, ನಾಗರಾಜ ಖಾರ್ವಿ ಸಮ್ಮಾನಿತರನ್ನು ಪರಿಚಯಿಸಿದರು. ಗ್ರಾಪಂ ಸದಸ್ಯ ಕೇಶವ ಖಾರ್ವಿ ಸಮ್ಮಾನ ಪತ್ರ ವಾಚಿಸಿದರು. ಮಹೇಶ್‌ ಎಸ್‌ಆರ್‌ಜಿ ಕಾರ್ಯಕ್ರಮ ನಿರೂಪಿಸಿದರು. ಮಡಿ ವಿಶ್ವನಾಥ ಖಾರ್ವಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com