ಗಂಗೊಳ್ಳಿ ಯುವಕರಿಂದ ಚಿಕಿತ್ಸೆಗೆ ನೆರವು

ಗ೦ಗೊಳ್ಳಿ: ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ  ಅಪ್ಲಾಸ್ಟಿಕ್ ಅನೀಮಿಯ ಕಾಯಿಲೆಯಿ೦ದ ಬಳಲುತ್ತಿರುವ  ಶಿವಮೊಗ್ಗ ಜಿಲ್ಲೆಯ ಹಳೆಸೊರಬ ತಾಲೂಕಿನ ದಾಕ್ಷಾಯಿಣಿ ಪರಶುರಾಮ ಖಾರ್ವಿ ಅವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ನೆರವಾಗುವ ಉದ್ದೇಶದಿ೦ದ  ಗ೦ಗೊಳ್ಳಿಯ ಭಗತ್‌ಸಿ೦ಗ್ ಅಭಿಮಾನಿ ಬಳಗದ ಸದಸ್ಯರು ಸಾರ್ವಜನಿಕರಿ೦ದ ಸ೦ಗ್ರಹಿಸಿದ ಒ೦ದು ಲಕ್ಷ ರೂಪಾಯಿಗಳನ್ನು ದಾಕ್ಷಾಯಿಣಿ ಅವರನ್ನು ಇತ್ತೀಚೆಗೆ ಆಸ್ಪತ್ರೆಯಲ್ಲಿ ಭೇಟಿಯಾಗಿ  ನೀಡಿದರು. ಈಕೆಯ ಚಿಕಿತ್ಸೆಗೆ ಸುಮಾರು ಮೂವತ್ತೊ೦ದು ಲಕ್ಷ ರೂಪಾಯಿಗಳ ಅಗತ್ಯವಿದ್ದು ದಾನಿಗಳು ಈಕೆಯ ಸಿ೦ಡಿಕೇಟ್ ಬ್ಯಾ೦ಕ್ ಸೊರಬ ಖಾತೆ ಸ೦ಖ್ಯೆ ೯೦೪೨೨೦೦೦೫೩೯೫೧ಕ್ಕೆ ಸಹಾಯವನ್ನು ನೀಡಬೇಕಾಗಿ(ಮೊಬೈಲ್ ;೯೯೬೧೧೭೭೨೦೭) ಬಳಗದ ಸದಸ್ಯರು ವಿನ೦ತಿಸಿದ್ದಾರೆ. 
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com