ಪೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ

ಕುಂದಾಪುರ: ಬಾಂಡ್ಯ ಎಜುಕೇಶನಲ್‌ ಟ್ರಸ್ಟ್‌ (ರಿ.)ನ ವಕ್ವಾಡಿಯ  ಗುರುಕುಲ ವಿದ್ಯಾಸಂಸ್ಥೆ ಮತ್ತು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕುಂದಾಪುರ ಇವರ ಸಹಯೋಗದೊಂದಿಗೆ   ಪೌಢಶಾಲಾ ವಿಜ್ಞಾನ ಶಿಕ್ಷಕರ ಕಾರ್ಯಾ ಗಾರ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗೋಪಾಲ ಶೆಟ್ಟಿ ಅವರಿಗೆ  ಸಮ್ಮಾನ  ಕಾರ್ಯಕ್ರಮ  ಜರಗಿತು. ಬೈಂದೂರು ವಲಯದ ಕ್ಷೇತ್ರ  ಶಿಕ್ಷಣಾಧಿಕಾರಿ ಭಾಸ್ಕರ ಶೆಟ್ಟಿ ಅವರು  ಕುಂದಾಪುರ ತಾಲೂಕಿನ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿರುವುದು ಅವರ ದಕ್ಷತೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಮಾಡುತ್ತದೆ. ಇಂತಹ ಕಾರ್ಯಗಾರಗಳು ನಡೆದಾಗ ಜ್ಞಾನದ ಕೊಡುಕೊಳ್ಳುವಿಕೆಗೆ ಸಹಾಯಕವಾಗುತ್ತದೆ ಎಂದರು.

ಬಳಿಕ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಧಿಕಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗೋಪಾಲ ಶೆಟ್ಟಿ  ಅವರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.  ಸಮ್ಮಾನ ಸ್ವೀಕರಿಸಿದ ಗೋಪಾಲ ಶೆಟ್ಟಿ  ಅವರು ತನ್ನ ಬದುಕಿನ ಘಟನೆಗಳನ್ನೆಲ್ಲ ತೆರೆದಿಟ್ಟರು. ಈ ಪ್ರಶಸ್ತಿ ನನ್ನ ದಕ್ಷತೆಯನ್ನು ಗುರುತಿಸಿ ಸರಕಾರ  ಕೊಟ್ಟಿರುವುದು. ಆದರೆ ಒಬ್ಬ ಗುರುವಾಗಿ ನನ್ನ ಕನಸು ನನಸಾಗುವುದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾನ ಗುಣಮಟ್ಟದ ಶಿಕ್ಷಣ ದೊರೆತಾಗಲೇ ಎಂದು ಗದ್ಗದಿತ ಧ್ವನಿಯಲ್ಲಿ ಮಾತನಾಡಿದರು. ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರವನ್ನು ಗುರುಕುಲ ಸಂಸ್ಥೆ ಏರ್ಪಡಿಸಿರುವುದು ಅವರ ಶೆ„ಕ್ಷಣಿಕ ಕಾಳಜಿಯನ್ನು ತಿಳಿಸುತ್ತದೆ. ಇದು ಶಿಕ್ಷಕರಿಗೆ ವರದಾನವಾಗಲಿದೆ. ಶಿಕ್ಷಕರಲ್ಲಿ ಕೌಶಲ ವೃದ್ಧಿಸುವುದರಿಂದ ವಿದ್ಯಾರ್ಥಿಗಳು ಏಳಿಗೆಯನ್ನು ಹೊಂದುತ್ತಾರೆ ಎಂದರು.

ಸಮಾರಂಭದಲ್ಲಿ ಗುರುಕುಲ ಸಂಸ್ಥೆಯ  ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಅಧ್ಯಕ್ಷತೆ ವಹಿಸಿದ್ದರು, ಬಾಂಡ್ಯಾ ಎಜುಕೇಶನಲ್‌ ಟ್ರಸ್ಟ್‌ (ರಿ.)ನ ಜಂಟಿ ಕಾರ್ಯನಿರ್ವಹಣಾಧಿಧಿಕಾರಿ ಬಾಂಡ್ಯಾ ಕೆ.ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಧಿಕಾರಿ ಡಾ|ಜಿ.ಎಚ್‌. ಪ್ರಭಾಕರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ರಾಮಕಿಶನ್‌ ಹೆಗ್ಡೆ, ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಜಯಪ್ರಕಾಶ ಮಾವಿನಕುಳಿ  ಉಪಸ್ಥಿತರಿದ್ದರು.

ಬಾಂಡ್ಯಾ ಎಜುಕೇಶನಲ್‌ ಟ್ರಸ್ಟ್‌ (ರಿ.)ನ ಜಂಟಿ ಕಾರ್ಯನಿರ್ವಹಣಾಧಿಧಿಕಾರಿ  ಅನುಪಮಾ ಎಸ್‌. ಶೆಟ್ಟಿ  ಸ್ವಾಗತಿಸಿ, ಪ್ರಾಸ್ತಾವಿಕವಾಗಿ  ಮಾತನಾಡಿದರು. ಗುರುಕುಲ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲೆ ರೂಪಾ ಶೆಣೈ ವಂದಿಸಿದರು. ಶಿಕ್ಷಕ ರಾಮಚಂದ್ರ ಹೆಬ್ಟಾರ್‌ ಕಾರ್ಯಕ್ರಮ ನಿರೂಪಣೆಗೈದರು. ಅನಂತರ ಧಾರವಾಡದ ವಿದ್ವಾಂಸ ಪ್ರೊ| ಕೊಣ್ಣೂರು ಹಾಗೂ ಎಂ.ಜಿ.ಎಂ. ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ| ವಿಜಯ್‌ ಅವರು  ಕಾರ್ಯಗಾರವನ್ನು ನಡೆಸಿಕೊಟ್ಟರು. ಗುರು ಕುಲದ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ತಯಾರು ಮಾಡಿದ ನವೀನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com