ಪ್ರವಾಸೋದ್ಯಮ ಮಾಹಿತಿ ಕಾರ್ಯಕ್ರಮ

ಕೋಡಿ: ಇಲ್ಲಿನ ಬ್ಯಾರೀಸ್‌ ಪ್ರಥಮ ದರ್ಜೆ ಕಾಲೇಜಿನ  ಕಾಮರ್ಸ್‌ ಅಸೋಸಿಯೇಶನ್‌ ಆಶ್ರಯದಲ್ಲಿ   ಪ್ರವಾಸೋದ್ಯಮದ ಕುರಿತು ಮಾಹಿತಿ ಕಾರ್ಯಕ್ರಮ  ಜರಗಿತು.
    ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರದ ಉದ್ಯಮಿ  ಅಭಿನಂದನ್‌ ಶೆಟ್ಟಿ ಮಾತನಾಡಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅವುಗಳನ್ನು ಉಪ ಯೋಗಿಸಿಕೊಳ್ಳಬೇಕು. ನಮ್ಮಲ್ಲಿ ಪ್ರವಾಸೋದ್ಯಮ ಒಂದು ಉತ್ತಮ ಉದ್ದಿಮೆಯಾಗಿ ಬೆಳೆಯಬೇಕಾದರೆ ಸರಕಾರದ ನೀತಿ-ನಿಯಮಗಳು ಜನರ ಮನೋಭಾವ ಹಾಗೂ ವಿದೇಶಿ ಪ್ರವಾಸಿಗರ ಬಗ್ಗೆ ಗೌರವ ಭಾವನೆ ಇರಬೇಕಾದುದು ಅತೀ ಅವಶ್ಯ.ಆಂತರಿಕ ಗಲಭೆ, ಸಂಘರ್ಷಗಳಿಗೆ ಅವಕಾಶ ಮಾಡಿಕೊಡದೆ ಶಾಂತಿಯನ್ನು ಕಾಪಾಡಿದಾಗ ಪ್ರವಾಸೋದ್ಯಮವನ್ನು ಬೆಳೆಸಬಹುದು ಎಂದು ಅಭಿಪ್ರಾಯ ಪಟ್ಟರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಹಾಗೂ ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರೊ| ದೋಮ ಚಂದ್ರಶೇಖರ್‌  ಮಾತನಾಡಿ, ಪದವಿಯ ಅನಂತರ ಸಾಮಾನ್ಯ ಕೋರ್ಸುಗಳಿಗಿಂತ ವಿಶೇಷವಾದ   ಕೋರ್ಸುಗಳಿಗೆ ವಿದ್ಯಾರ್ಥಿ ಗಳು ದಾಖಲಾತಿ ಪಡೆದು ಒಳ್ಳೆಯ ಉದ್ಯೋಗವನ್ನು ಪಡೆಯಬಹುದು. ನಾವು ಮಾಡುವ ಪ್ರತಿಯೊಂದು ಕೆಲಸ ದಲ್ಲಿಯೂ ಕೌಶಲ, ನೈಪುಣ್ಯ ಇರಬೇಕು ಎಂದರು.
     ವಾಣಿಜ್ಯ ವಿಭಾಗದ ಮುಖ್ಯಸ್ಥೆ  ಮಾಲತಿ ಸ್ವಾಗತಿಸಿ, ವಿದ್ಯಾರ್ಥಿನಿ ನಸೀಬಾ ಕಾರ್ಯಕ್ರಮ ನಿರೂಪಿಸಿದರು. ನಿಖತ್‌ ಪರ್ವೀನ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com