ಪರಿಸರ, ವನ್ಯಜೀವಿ ಸಂರಕ್ಷಣೆ ಕಾರ್ಯಾಗಾರ

ಕೊಲ್ಲೂರು: ಕೊಲ್ಲೂರು ವನ್ಯಜೀವಿ ವಲಯದ ವತಿಯಿಂದ ಕೊಲ್ಲೂರು ಪ್ರೌಢಾಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವು  ಕೊಲ್ಲೂರು ಆನೆಜರಿ ಪ್ರಕೃತಿ ಶಿಬಿರದಲ್ಲಿ ಜರಗಿತು.
   ಕಾರ್ಯಕ್ರಮವನ್ನು ಕೊಲ್ಲೂರು ಗ್ರಾ. ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ್‌ ಅವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಣಿ ಶಾಸ್ತ್ರ ಮುಖ್ಯಸ್ಥ ಡಾ| ಈಶ್ವರ ಭಟ್‌ ಅವರು ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
     ಅತಿಥಿಗಳಾಗಿ ಪರಿಸರ ಅಭಿವೃದ್ಧಿ ಸಮಿತಿ ದಳಿ ಇದರ ಅಧ್ಯಕ್ಷ ಡಾ| ಶ್ರೀಕಾಂತ್‌, ಮಾವಿನಕಾರು ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ  ಕೊಲ್ಲೂರು ಗ್ರಾ. ಪಂ. ಸದಸ್ಯ ಜಯಪ್ರಕಾಶ್‌ ಶೆಟ್ಟಿ, ಕೊಲ್ಲೂರು ವಲಯ ಅರಣ್ಯ ಅಧಿಕಾರಿ ಶಿವರಾಮ್‌ ಆಚಾರ್‌ ಉಪಸ್ಥಿತರಿದರು.
     ಸರಕಾರಿ ಪ್ರೌಢ ಶಾಲೆ ಚಿತ್ತೂರು ಮತ್ತು ಅಮೃತಾಮಯಿ ಶಾಲೆ ನಗರ ಇದರ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com