ಮನೆ ಸಂಸ್ಕೃತಿ ಪ್ರತೀಕ: ಪೇಜಾವರ ಶ್ರೀ

ಕೋಟೇಶ್ವರ:  ಮನೆಯೊಂದು ದೇವಾಲಯ ಇದ್ದ ಹಾಗೆ. ಇದು ಒಂದು ಸಂಸ್ಕೃತಿಯ ಪ್ರತೀಕ. ನಾವು ಎಲ್ಲೇ ಇದ್ದರೂ ಹುಟ್ಟೂರಿನ ಬಗ್ಗೆ  ಹೆಚ್ಚು ಗೌರವ ಹೊಂದಿರುತ್ತೇವೆ. ಹುಟ್ಟೂರಲ್ಲೊಂದು ಮನೆ ಕಟ್ಟಿಕೊಂಡು ಅಲ್ಲಿ ಉಳಿಯುವ ಪದ್ಧತಿ ರೂಢಿ ಮಾಡಿಕೊಂಡರೆ ಆಗ ನಮ್ಮ ಸಂಸ್ಕೃತಿ ಉಳಿಯುವುದು. ನಮ್ಮ ಗ್ರಾಮದ ಮೂಲ ಮನೆ ಉಳಿಸಿಕೊಂಡರೆ ಅಲ್ಲಿ ಸಂಸ್ಕಾರಯುತ ಜೀವನಕ್ರಮ ನಡೆಸಲು ಸಾಧ್ಯ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಹೇಳಿದರು.


ಅವರು ಗೋಪಾಡಿಯ ಜಿ.ಆರ್‌.ಎನ್‌. ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಫೆ. 11ರಂದು ಗೋಪಾಡಿಯಲ್ಲಿ ಏರ್ಪಡಿಸಲಾದ ಪಂಡಿತರತ್ನ ಬಿರುದು ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವದಿಸಿದರು.  ಈ ಸಂದರ್ಭದಲ್ಲಿ ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧಿಧೀಶತೀರ್ಥ ಶ್ರೀಪಾದಂಗಳವರು, ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಅದಮಾರು ಮಠದ ಶ್ರೀ  ಈಶ ಪ್ರಿಯ ತೀರ್ಥ ಸ್ವಾಮಿಗಳು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.

ಪಂಡಿತರತ್ನ ಪ್ರಶಸ್ತಿಯನ್ನು ಗೋಪಾಡಿ ರಾಘವೇಂದ್ರ ಭಟ್‌, ಶ್ರೀ ಪತಿ ಉಪಾಧ್ಯಾಯ ಕುಂಭಾಶಿ, ಲಕ್ಷ್ಮೀನಾರಾಯಣ ವರ್ಣ, ಸುಬ್ರಹ್ಮಣ್ಯ ದಾಸ, ಪ್ರಶಾಂತ ಉಪಾಧ್ಯಾಯ ಅವರಿಗೆ ನೀಡಿ ಗೌರವಿಸಲಾಯಿತು. ಪುರೋಹಿತ ರತ್ನ ಪ್ರಶಸ್ತಿಯನ್ನು ಜಿ. ಪರಮೇಶ್ವರ ಭಟ್‌, ಲಕ್ಷ್ಮೀನಾರಾಯಣ ತಂತ್ರಿ, ಪದ್ಮನಾಭ ಅಡಿಗ, ರಾಮಚಂದ್ರ ಭಟ್‌, ವೆಂಕಟೇಶ ಭಟ್‌, ವಿ. ರಾಘವೇಂದ್ರ ವರ್ಣ ಹಾಗೂ ಗಣಪತಿ ಭಟ್‌ ಅವರಿಗೆ ನೀಡಿ ಸಮ್ಮಾನಿಸಲಾಯಿತು. ಪುರೋಹಿತ ರಶ್ಮಿ ಪ್ರಶಸ್ತಿಯನ್ನು ಲಕ್ಷ್ಮೀನಾರಾಯಣ ಉಪಾಧ್ಯಾಯ, ಶ್ರೀಧರ ಅಡಿಗ, ಬಿ. ರಾಮಕೃಷ್ಣ ವರ್ಣ, ಬಿ. ವಾದಿರಾಜ ವರ್ಣ, ಕೃಷ್ಣಮೂರ್ತಿ ಭಟ್‌, ಸುದರ್ಶನ್‌ ಉಪಾಧ್ಯಾಯ, ಶ್ರೀಧರ ಉಪಾಧ್ಯಾಯ, ಗುರುರಾಜ ಭಟ್‌, ಆನಂದ ಆಚಾರ್ಯ, ವಿಕ್ರಮ ಗೋಟ ಅವರಿಗೆ ನೀಡಿ ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಹಿರಿಯ ಹೊಟೇಲ್‌ ಉದ್ಯಮಿಗಳಾದ ಎನ್‌. ಆರ್‌. ನಾರಾಯಣ್‌ ರಾವ್‌, ಕೆ. ವಿ. ಆನಂದ ರಾವ್‌, ರಾಮಚಂದ್ರ ವರ್ಣ ಉಪಸ್ಥಿತರಿದ್ದರು.

ಜಿ.ಆರ್‌.ಎನ್‌. ಫೌಂಡೇಶನ್‌ನ ಆಡಳಿತ ನಿರ್ದೇಶಕ ಜಿ. ಶ್ರೀನಿವಾಸ ರಾವ್‌ ಸ್ವಾಗತಿ ಸಿದರು. ಜಿ. ವಿ. ರಮೇಶ್‌ ವಂದಿಸಿದರು. ಖ್ಯಾತ ನಟಿ ಹಾಗೂ  ನಿರೂಪಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com