ಬುಡಕಟ್ಟು ಸಂಸ್ಕೃತಿಯಲ್ಲಿ ಜೀವನದ ಮೌಲ್ಯ

ಕುಂದಾಪುರ: ಬುಡಕಟ್ಟು ಸಂಸ್ಕೃತಿಯ ಅನಾವರಣವನ್ನು ಮಾಡು ವುದರ ಮೂಲಕ ನಮ್ಮ ನಮ್ಮ ಒಳ ಮನಸ್ಸು ತೆರೆದುಕೊಳ್ಳುತ್ತದೆ. ಬುಡಕಟ್ಟು ಸಮುದಾಯದ ಸಂಸ್ಕೃತಿಯಲ್ಲಿ ಜೀವನದ ಮೌಲ್ಯಗಳಿವೆ. ಜೀವನಪ್ರೀತಿ ಇದೆ. ಅದನ್ನು ತೆರದುಕೊಳ್ಳಲು ತಿಳಿಸಲು ಇದು ವೇ
ದಿಕೆಯಾಗಿದೆ ಎಂದು   ಕೆದೂರು ಸ್ಪೂರ್ತಿಧಾಮದ  ಕೇಶವ ಕೋಟೇಶ್ವರ ಹೇಳಿದರು.

ಅವರು ಭಂಡಾರ್ಕಾರ್ ಕಾಲೇಜಿನಲ್ಲಿ  ಕಲಾ ವಿಭಾಗದ ಆಶ್ರಯದಲ್ಲಿ  ನಡೆದ  ಬುಡಕಟ್ಟು ಮತ್ತು ಜಾನಪದ ಸಂಸ್ಕೃತಿ ಅನಾವರಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ| ಎಚ್‌.ಶಾಂತಾರಾಂ ಮಾತನಾಡಿ ನಾವು ಆಧುನಿಕ ಪ್ರಪಂಚಕ್ಕೆ ತೆರೆದುಕೊಂಡಂತೆ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ಯುವಮನಸ್ಸುಗಳಲ್ಲಿ ಭಾರತೀಯ ಸಂಸ್ಕೃತಿಯ ಇಂತಹ ವೈಶಿಷ್ಟ Âವನ್ನು ಮತ್ತು ಅದರೊಳಗಿನ ಅಂತಃಸತ್ವಗಳು,  ಬದುಕಿನ ಭರವಸೆಗಳು ಇಮ್ಮಡಿಗೊಳಿಸಲು ನೆರವಾಗುತ್ತವೆ ಎಂದುಹೇಳಿದರು.

ಈ ಸಂದರ್ಭದಲ್ಲಿ ಪದವಿಪೂರ್ವ  ಕಾಲೇಜಿನ ಪ್ರಾಂಶುಪಾಲ  ಜಿ.ಎಂ.ಗೊಂಡ ಉಪಸ್ಥಿತರಿದ್ದರು.

ಪ್ರೊ| ಜಿ.ಎಂ. ಉದಯಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕಿ ಸ್ನೇಹಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ರ್ಥಿನಿ ಚಂದ್ರಾವತಿ ವಂದಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲ  ಡಾ| ಎನ್‌. ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಸಾರ್ವಜನಿಕರ ಪರವಾಗಿ  ವಿಜಯಲಕ್ಷ್ಮೀ ಶಾಂತಾರಾಂ ಮತ್ತು ಮನೋಹರ ಕುಂದರ್‌ ಮತ್ತು ವಿದ್ಯಾರ್ಥಿಗಳ ಪರವಾಗಿ ಸೃಜನಾ ಅಡಿಗ ಮತ್ತು ಪ್ರಿಯಾಂಕಾ ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com