ಭೂಸ್ವಾಧೀನ ಕಾಯ್ದೆ ಹಿಂಪಡೆಯಲು ರೈತ ಸಂಘ ಆಗ್ರಹ

ಕುಂದಾಪುರ: ಕೇಂದ್ರ ಸರಕಾರವು  ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ದಿಲ್ಲಿಯ ಜಂತರ್‌-ಮಂತರ್‌ನಲ್ಲಿ ಹೋರಾಟ ಪ್ರಾರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟ ಹಾಗೂ ನಿಲುವನ್ನು ಉಡುಪಿ ಜಿಲ್ಲಾ ರೈತ ಸಂಘ ಬೆಂಬಲಿಸುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಪಿಐ ಸರಕಾರ ದೇಶದ ರೈತಾಪಿ ವರ್ಗದ ಜನರಿಗೆ ನ್ಯಾಯ ದೊರಕಬೇಕು ಎನ್ನುವ ಕಾರಣಕ್ಕಾಗಿ 2013ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಪ್ರಸ್ತುತ ಕೇಂದ್ರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧ್ಯಾದೇಶದ ಮೂಲಕ ಈ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದಾಗಿ ರೈತರ ಕೃಷಿ ಭೂಮಿಯನ್ನು, ಕೈಗಾರಿಕೆ ಕಾರಿಡಾರ್‌, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಉದ್ಯಮಗಳು, ಮೂಲಸೌಲಭ್ಯ ಯೋಜನೆ, ರಕ್ಷಣೆ ಹಾಗೂ ವಸತಿ ಯೋಜನೆಗಳಿಗಾಗಿ, ಅಗತ್ಯವಿರುವ ಭೂಮಿಗಳನ್ನು ಅದರ ಮಾಲಿಕರ ಅನುಮತಿ ಪಡೆಯದೆ ವಶಪಡಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದುರಿಂದ ದೇಶದ ಜೀವಾಳವಾಗಿರುವ ರೈತರ ಸ್ವಾತಂತ್ರ್ಯವನ್ನೇ ಹರಣ ಮಾಡಿದಂತಾಗಿದೆ ಎಂದು ಪ್ರತಾಪ್‌ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com