ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿರುವ ನ್ಯೂ ಹರ್ಕುಲಸ್ ಜಿಮ್ ಇದರ ಆಶ್ರಯದಲ್ಲಿ ನಾಲ್ಕನೇ ಬಾರಿಗೆ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ-2015 ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜರಗಿತು.
ವಡೇರಹೋಬಳಿ ಕಾರ್ಪೋರೇಷನ್ ಬ್ಯಾಂಕಿನ ಸೀನಿಯರ್ ಮನೇಜರ್ ಮಹಾಲಿಂಗ ದೇವಾಡಿಗ ಈ ಸ್ಪರ್ಧೆಯನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಂದಾಪುರ ಘಟಕದ ಅಧ್ಯಕ್ಷ ದಿನಕರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್, ಕೊಲ್ಲೂರು ಶ್ರೀ ಕೃಷ್ಣ ಇಂಡಸ್ಟ್ರಿಯಲ್ ಸೊಸೈಟಿಯ ಪ್ರಬಂಧಕ ಸತ್ಯನಾರಾಯಣ ರಾವ್, ಕುಂದಾಪುರ ತಾಲೂಕು ಕಚೇರಿಯ ಆಹಾರ ನಿರೀಕ್ಷಕ ನರಸಿಂಹ ಮೂರ್ತಿ ಬಿ.ಎ., ಮುತ್ತೂಟ್ ಫೈನಾನ್ಸ್ನ ಶಾಖಾ ಪ್ರಬಂಧಕ ಮಂಜುನಾಥ ತಲ್ಕಾನ, ಉದ್ಯಮಿ ಸುಧೀರ್ ಭಟ್, ಜೇಸಿಐ ಕುಂದಾಪುರ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ರವಿರಾಜ್ ಆಚಾರ್, ನ್ಯೂ ಹರ್ಕುಲಸ್ ಜಿಮ್ನ ಅಧ್ಯಕ್ಷ ಅಜಿತ್ ಪೂಜಾರಿ ನ್ಯಾಯವಾದಿ ಜಯಚಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಗೋವರ್ಧನ್ ಬಂಗೇರಾ, ಕಾರ್ಯದರ್ಶಿ ಶಿವಕುಮಾರ್ ಜಿಮ್ನ ವ್ಯವಸ್ಥಾಪಕ ಸತೀಶ್ ಖಾರ್ವಿ ಉಪಸ್ಥಿತರಿದ್ದರು.
ಶಿವಕುಮಾರ್ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಬೆಳಗೋಡು ಕಾರ್ಯಕ್ರಮ ನಿರ್ವಹಿಸಿ ದರು. ಈ ಸ್ಪರ್ಧೆಗೆ ಉಡುಪಿ, ದ.ಕ. ಹಾಗೂ ಉ.ಕ . ಜಿಲ್ಲೆಗಳಿಂದ ಆಗಮಿಸಿದ ಸ್ಪರ್ಧಿಗಳು ಭಾಗವಹಿಸಿದ್ದರು.
0 comments:
Post a Comment