ಹೊಳ್ಮಗೆ ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಸೇನಾಪುರ ಕುಟುಂಬಸ್ಥರ ಹೊಳ್ಮಗೆ ಮೂಲ ನಾಗಬನದಲ್ಲಿ  ಜರಗಿದ ಅಷ್ಟಪವಿತ್ರ ನಾಗಮಂಡಲ ಸಂಭ್ರಮದಿಂದ ಜರಗಿತು.
     ಅಷ್ಟ ಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಹಿಂದಿನ ದಿನದ ಬೆಳಗ್ಗೆಯಿಂದಲೇ ವಿವಿಧ ಹೋಮ ಹವನಗಳು ನಡೆದಿದ್ದು, ಮಹಾಮಂಗಳಾರತಿ, ನಾಗದೇವರ ಸಂದರ್ಶನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಹಾಲಿಟ್ಟು ಸೇವೆ, ಅಷ್ಟಾವಧಾನ ಸೇವೆ, ರಾತ್ರಿ ಮಂಡಲ ಸೇವೆ, ಅಷ್ಟಪವಿತ್ರ ನಾಗಮಂಡಲ ಸೇವೆ, ಡಮರು ಸೇವೆ, ನರ್ತನ ಸೇವೆ, ಪ್ರಸಾದ ವಿತರಣೆ, ಫಲ ಮಂತ್ರಾಕ್ಷತೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.
     ಅನ್ನಸಂತರ್ಪಣೆಯಲ್ಲಿ 25,000ಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಿದ್ದರು. ಅನ್ನದಾನಕ್ಕಾಗಿ ಉತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳು, ಪರಿಸರದ ಗ್ರಾಮಾಭಿವೃದ್ಧಿಯೋಜನೆಯ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಗಳು ಸಹಕಾರ ನೀಡಿದರು. ನಾಗಮಂಡಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮುಳ್ಳಿಕಟ್ಟೆ ಹಾಗೂ ವಂಡ್ಸೆಯಿಂದ ಬಸ್‌ನ ವ್ಯವಸ್ಥೆ ಮಾಡಲಾಗಿತ್ತು.
     ಹೊಳ್ಮಗೆ ರಘುರಾಮ ಶೆಟ್ಟಿ ದಂಪತಿ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯ ಕ್ರಮಗಳಿಗೆ ಪ್ರಧಾನ ಅರ್ಚಕರು ಮತ್ತು ಪುರೋ ಹಿತರಾಗಿ ವೇ| ಮೂ| ಚೆನ್ನಕೇಶವ ಉಪಾ ಧ್ಯರು ಮಾರ್ಗದರ್ಶನ ನೀಡಿದರು. ನಾಗಪಾತ್ರಿ ವೇ| ಮೂ| ಅಂಪಾರು ರವಿರಾಜ ಭಟ್‌,  ವೈದ್ಯ ವೈ.ಮಂಜುನಾಥ ವೈದ್ಯ ಮತ್ತು ಬಳಗ ಗೋಳಿಯಂಗಡಿ ಸಹಕರಿಸಿದರು. ಸಂಜೆ ಸಂಗೀತ ರಸಮಂಜರಿ, ಮಂಡಲೋತ್ಸವದ ಬಳಿಕ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕುಟುಂಬದ ಹಿರಿಯರಾದ ಬಿ.ಎನ್‌. ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ ಬಗ್ವಾಡಿ, ಹೊಳ್ಮಗೆ ರಘುರಾಮ ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ,  ಸುಭಾಶ್‌ ಶೆಟ್ಟಿ ಹೊಳ್ಮಗೆ, ನರಸಿಂಹ ಶೆಟ್ಟಿ ಹೊಳ್ಮಗೆ, ಕರುಣಾಕರ ಹೆಗ್ಡೆ, ಚಿತ್ರರಂಜನ್‌ ಹೆಗ್ಡೆ ಹರ್ಕೂರು, ಎಚ್‌. ಮಹಾಬಲ ಶೆಟ್ಟಿ ಸೇನಾಪುರ, ಕರುಣಾಕರ ಶೆಟ್ಟಿ ಹೊಳ್ಮಗೆ, ವಂಡಬಳ್ಳಿ ಜಯರಾಮ ಶೆಟ್ಟಿ ಮೊದಲಾದವರು ನಾಗಮಂಡಲೋತ್ಸವದ ಯಶಸ್ಸಿಗೆ ಸಹಕರಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com