ಆಧಾರ್ ಕೇಂದ್ರದಲ್ಲಿ ಹಣದ ಬೇಡಿಕೆ: ಡಿವೈಎಫ್‌ಐ ಪ್ರತಿಭಟನೆ

ಕುಂದಾಪುರ: ಇಲ್ಲಿನ ಮಹಾತ್ಮಗಾಂಧಿ ಪಾರ್ಕ್‌ನ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ನಡೆಸುತ್ತಿರುವ ಆಧಾರ್ ಕಾರ್ಡ್ ನೊಂದಣಿ ಕೇಂದ್ರದಲ್ಲಿ  ಆಧಾರ್ ಕಾರ್ಡ್ ನೊಂದಣಿ ಮಾಡಲು ಹಣದ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಕುಂದಾಪುರದ ಡಿವೈಎಫ್‌ಐ ಕಾರ್ಯಕರ್ತರು ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಧಾರ್ ನೊಂದಣಿಗೆಂದು ಸರತಿ ಸಾಲಿನಲ್ಲಿ ನಿಂತ ಫಲಾನುಭವಿಯಲ್ಲಿ ರೂ.100 ನೀಡುವಂತೆ ಬೇಡಿಕೆ ಮುಂದಿಟ್ಟಿದ್ದನ್ನು ಪ್ರಶ್ನಿಸಿದ ಡಿವೈಎಫ್‌ಐ ಕಾರ್ಯಕರ್ತರು ಕೇಂದ್ರದ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದರು. ಇದೊಂದು ಸರಕಾರಿ ಉಚಿತ ಕಾರ್ಯಕ್ರಮ.  ಅವರಲ್ಲಿ ಹಣದ ಬೇಡಿಕೆ ಇರಿಸಿದ್ದು ತಪ್ಪು ಎಂದು ತರಾಟೆಗೆ ತೆಗೆದುಕೊಂಡರು. 

ಆದರೆ ಡಿವೈಎಫ್‌ಐ ಆರೋಪವನ್ನು ತಳ್ಳಿ ಹಾಕಿರುವ ಸಿಬ್ಭಂದಿಗಳು ಇಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ ಹಾಗೂ ಯಾರಿಂದಲೂ ಹಣ ಪಡೆಯಲಾಗುತ್ತಿಲ್ಲ ಎಂದಿದ್ದಾರೆ. ಸ್ಥಳಕ್ಕಾಗಮಿಸಿ ಪೋಲಿಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಕೇಂದ್ರದ ಮಧ್ಯವರ್ತಿಗಳು ಹಣ ಪಡೆಯುತ್ತಿರುವ ವಿಡಿಯೋ ತುಣುಕನ್ನು ಆಧರಿಸಿ ತನಿಕೆ ಆರಂಭಿಸಿದ್ದಾರೆ. ಈ ಬಗ್ಗೆ ಸಹಾಯಕ ಕಮಿಷನರ್ ಗೆ ದೂರು ನೀಡಲಾಯಿತು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com