ಬೈಂದೂರು ರಂಗ ತರಂಗ-2015 ಉದ್ಘಾಟನೆ

ಬೈಂದೂರು: ಹವ್ಯಾಸಿ ರಂಗ ತಂಡ ಲಾವಣ್ಯ ಬೈಂದೂರು ಮತ್ತು ಯಡ್ತರೆ ಗ್ರಾ.ಪಂ. ಸಹಯೋಗದಲ್ಲಿ ಹಮ್ಮಿಕೊಂಡ ರಂಗತರಂಗ-2015 ಲಾವಣ್ಯ ರಂಗ ಸಂಭ್ರಮ ಕಾರ್ಯಕ್ರಮ ಶಾರದಾ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಂಗಕರ್ಮಿ ರಮಾನಂದ ಐನಕೈ ಸಂಕಲ್ಪಗಳಿದ್ದಾಗ ಸಾಧನೆ ಸಾಧ್ಯ. ರಂಗಾಸಕ್ತಿ  ಎನ್ನುವುದು ಬದುಕಿನ ಜೊತೆ ಜೊತೆಗೆ ಬೆಸೆದುಕೊಂಡ ಬಾಂಧವ್ಯವಾಗಿದೆ. ಕನ್ನಡದ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯದ ಕೊಡುಗೆ ಅನನ್ಯವಾಗಿದೆ. ಶ್ರದ್ಧೆ ಮತ್ತು ಶ್ರಮವಿದ್ದಾಗ ದಣಿವಿನ ಅರಿವಾಗುವುದಿಲ್ಲ. ಹೀಗಾಗಿ ನಾಟಕಗಳು ಒತ್ತಡದ ಬದುಕಿಗೊಂದಿಷ್ಟು ಸಂತೃಪ್ತಿ ನೀಡುತ್ತವೆ ಎಂದರು.

ಮುಖ್ಯ ಅತಿಥಿ ಮಾಜಿ ಶಾಸಕ ಕೆ.ಲಕ್ಷ್ಮೀ ನಾರಾಯಣ ಮಾತನಾಡಿ ನಾಟಕದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಲಾವಣ್ಯ ರಂಗ ತಂಡ ಉತ್ಕೃಷ್ಟ ಪ್ರತಿಭಾವಂತರಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಬೈಂದೂರಿನ ಹೆಮ್ಮೆಯಾಗಿದೆ ಎಂದರು. ಲಾವಣ್ಯದ ಅಧ್ಯಕ್ಷ ಯೋಗೀಶ್‌ ಬಂಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ ಸಾಲಿಯಾನ್‌, ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ್‌ ಶೆಟ್ಟಿ, ಗೌರವಾಧ್ಯಕ್ಷ ಬಿ.ರಾಮ ಟೈಲರ್‌, ಕಾರ್ಯದರ್ಶಿ ನರಸಿಂಹ ಬಿ.ನಾಯಕ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಂಗ ಕಲಾವಿದ ಬಿ.ಮೋಹನ್‌ ಕಾರಂತರನ್ನು ಸಮ್ಮಾನಿಸ ಲಾಯಿತು. ಹಾಗೂ ಎಂ.ಐ.ಟಿ. ಸಹ ಪ್ರಾಧ್ಯಾಪಕ ಡಾ| ಯು. ರಾಘವೇಂದ್ರ, ಎಂ.ಎ. ಪ್ರಥಮ ರ್‍ಯಾಂಕ್‌ ವಿಜೇತೆ ಸುರಕ್ಷಾ , ಕ್ರೀಡಾಪಟು ಪ್ರಶಾಂತ ಕೆ.,  ಶಿಕ್ಷಕ ಗುರುರಾಜ್‌ ಅವರನ್ನು ಗುರುತಿಸಲಾಯಿತು.

ಯೋಗೇಶ್‌ ಸ್ವಾಗತಿಸಿ, ಗಣಪತಿ.ಎಸ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಿರೀಶ್‌ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಸದಾಶಿವ.ಡಿ. ಪಡುವರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com