ಮರಂತೆ ಬಡಾಕೆರೆ ಸೊಸೈಟಿ: ಅಧ್ಯಕ್ಷರಾಗಿ ರಾಜು ಪೂಜಾರಿ

ಮರವಂತೆ: ಇಲ್ಲಿನ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ  ರಾಜು ಪೂಜಾರಿ ಆಯ್ಕೆಯಾಗಿದ್ದಾರೆ. ಈ ಭಾರಿಯೂ ಅಧ್ಯಕ್ಷ ಪದವಿಗೇರುವ ಮೂಲಕ ರಾಜು ಪೂಜಾರಿಯವರು 12ನೇ ಬಾರಿ ಅಧ್ಯಕ್ಷರಾಗಿ ಪದವಿ ಅಲಂಕರಿಸಿದಂತಾಗಿದೆ. ಕಳೆದ 20 ವರ್ಷಗಳಿಂದ ಮರವಂತೆ ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
   ಸಂಘದ ಉಪಾಧ್ಯಕ್ಷರಾಗಿ ಎಂ. ಚಂದ್ರಶೀಲ ಶೆಟ್ಟಿ ಆಯ್ಕೆಗೊಂಡಿದ್ದಾರೆ. ನಿರ್ದೇಶಕರಾಗಿ ಎಂ.ವಿನಾಯಕ ರಾವ್, ವಾಸು ಪೂಜಾರಿ, ಜಗದೀಶ.ಪಿ.ಪೂಜಾರಿ, ಬೋಜ ನಾಯ್ಕ, ಎಂ.ನಾಗಮ್ಮ, ಬಿ.ಎಚ್.ಅಬ್ದುಲ್‌ ರಹಮಾನ್, ಸರೋಜಾ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ ಆಯ್ಕೆಯಾಗಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com