ಮರವಂತೆ ಮಕ್ಕಳ ಗ್ರಾಮಸಭೆ ಸಂಪನ್ನ

ಮರವಂತೆ: ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ   ಈ ಸಾಲಿನ ಮಕ್ಕಳ ಗ್ರಾಮಸಭೆ ವಿಶಿಷ್ಟ ಶೈಲಿಯಲ್ಲಿ ನಡೆಯಿತು. ಊರಿನ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು, ಮಕ್ಕಳ ಹಕ್ಕು ಮತ್ತು ಮಕ್ಕಳ ಗ್ರಾಮಸಭೆಯ ಔಚಿತ್ಯ ಸಾರುವ ಫಲಕ, ಘೋಷಣೆಗಳೊಂದಿಗೆ ಶಿಕ್ಷಕರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ  ಬಂದು  ಸಭಾಂಗಣವನ್ನು ಸೇರಿದರು.  ಗ್ರಾಮ ಪಂಚಾಯತ್‌ ಅಧ್ಯಕ್ಷೆ ಕೆ. ಎ. ಸುಗುಣಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮಕ್ಕಳು  ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸವಿತಾ, ಮಕ್ಕಳ ರಕ್ಷಣಾ ಘಟಕದ ಪದ್ಮಾವತಿ, ಶಿಕ್ಷಕ ಸುರೇಶ ಗೌಡ ಪಾಟೀಲ್‌, ಆರೋಗ್ಯ ಸಹಾಯಕ ವಿನಯ್‌, ಮಕ್ಕಳ ಮತ್ತು ಮಹಿಳಾ ಮಿತ್ರೆಯರಾದ ಅನಿತಾ, ಸುನೀತಾ, ಗ್ರಾ. ಪಂ. ಸದಸ್ಯ ಗ್ರೇಶನ್‌ ಕ್ರಾಸ್ತಾ ವಿವಿಧ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು  ಉಪಸ್ಥಿತರಿದ್ದರು.

ನಾಲ್ಕು ಶಾಲೆಗಳ ಪ್ರತಿನಿಧಿಧಿಗಳಾದ ಪುನೀತ್‌, ದ್ವಿತಿ, ಆದಿತ್ಯ, ಅಭಿಷೇಕ್‌ ತಮ್ಮ ಶಾಲೆಗಳ ಪರಿಚಯ, ಸಾಧನೆ, ಕೊರತೆಗಳನ್ನು ಸಭೆಯ ಮುಂದಿಟ್ಟರು. ಶಮನಾ ಮಧ್ಯಸ್ಥ,  ಶ್ರೀವತ್ಸ, ಆಶ್ರಿತಾ, ಆಕಾಂಕ್ಷ ಮಕ್ಕಳ ಹಕ್ಕುಗಳ ರಕ್ಷಣೆ ಮಕ್ಕಳ ಸಂರಕ್ಷಣೆ, ಪಾಲನೆ-ಪೋಷಣೆಗೆ ಅನುಸರಿಸಬೇಕಾದ ಕ್ರಮಗಳ ಬಗೆಗೆ ಮಕ್ಕಳಿಗೆ ಮಾಹಿತಿ ನೀಡಿದರು. 

ಸುಜನ್‌ ಆರ್‌., ಪ್ರಾಣೇಶ, ಆದರ್ಶ ಮಕ್ಕಳು ಅಧ್ಯಯನ ನಡೆಸಿ ಸಿದ್ಧಪಡಿಸಿದ್ದ ಕೊರತೆಗಳ ವಿವರಗಳನ್ನೊಳಗೊಂಡ ಪೆಟ್ಟಿಗೆಗಳನ್ನು ಅಧ್ಯಕ್ಷರಿಗೆ ಒಪ್ಪಿಸಿದರು. ಅವುಗಳಲ್ಲಿನ ವಿವರಗಳನ್ನು ರೋಶನ್‌, ಲವಿನಾ, ರಿಂಕು, ಅಂಕಿತಾ ಸಭೆಯಲ್ಲಿ ಮಂಡಿಸಿದರು. ಎಲ್ಲ ರಸ್ತೆಗಳ ಡಾಮರೀಕರಣ, ಬೀದಿ ದೀಪ ವಿಸ್ತರಣೆ, ಧೂಮಪಾನ, ಮದ್ಯಪಾನ, ಪ್ಲಾಸ್ಟಿಕ್‌ ಮುಕ್ತ ಗ್ರಾಮ ನಿರ್ಮಾಣ ಅವರ ಪ್ರಮುಖ ಬೇಡಿಕೆಗಳಾಗಿದ್ದುವು.

ಅಧ್ಯಕ್ಷೆ ಕೆ. ಎ. ಸುಗುಣಾ ಸಭೆಯಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.  ಸದಸ್ಯ ಎಸ್‌. ಜನಾರ್ದನ ಮಕ್ಕಳ ಗ್ರಾಮಸಭೆಯ ಔಚಿತ್ಯ ಮತ್ತು ಮಹತ್ವ ವಿವರಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಕಳೆದ ಸಾಲಿನ ಮಕ್ಕಳ ಗ್ರಾಮಸಭೆಯ ಕಾರ್ಯಕಲಾಪಗಳ ವರದಿ ಮಂಡಿಸಿದರು.  ಕರ ಸಂಗ್ರಾಹಕ ಶೇಖರ ಕಳೆದ ಸಭೆಯ ಬಳಿಕ ನಡೆದ ಅಭಿವೃದ್ಧಿ ಚಟುವಟಿಕೆಗಳ ಅನುಪಾಲನಾ ವರದಿ ಓದಿದರು. ಹರಿಶ್ಚಂದ್ರ ಆಚಾರ್ಯ ವಂದಿಸಿದರು. ವಿದ್ಯಾರ್ಥಿ ಅಬ್ದುಲ್‌ ರಶೀದ್‌ ನಿರೂಪಿಸಿದರು.

ಕೊನೆಯಲ್ಲಿ ಪ್ರತಿನಿಧಿಗಳು ಪಂಚಾ ಯತ್‌ ಕಚೇರಿ ಆವರಣಕ್ಕೆ ತೆರಳಿ ಅಲ್ಲಿನ ಮರಕ್ಕೆ ಬಿಳಿ ಮತ್ತು ಕೆಂಪು ರಿಬ್ಬನ್‌ ಸುತ್ತುವ ಮೂಲಕ ಈಡೇರಿದ ಮತ್ತು ಈಡೇರದ ಅಹವಾಲುಗಳ ಸಂಖ್ಯೆಯನ್ನು ಸಾರ್ವಜನಿಕವಾಗಿ ಸಂಕೇತಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com