ಮರವಂತೆ ಗ್ರಾಮಸಭೆ

ಮರವಂತೆ: ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ನಡೆದ ಎರಡನೆ ಸುತ್ತಿನ ಗ್ರಾಮಸಭೆ ನಡೆಯಿತು.

ಭೂಪರಿವರ್ತನೆ, ನಿವೇಶನ ಅನುಮೋದನೆಗೆ ಇರುವ ತೊಡಕುಗಳು, ವಿದ್ಯುತ್‌ ಸಂಪರ್ಕಕ್ಕೆ ಕಟ್ಟಡ ನಿರ್ಮಾಣ ಪೂರ್ವಾನುಮತಿ ಶರ್ತ ವಿಧಿಧಿಸುತ್ತಿರುವ ಗ್ರಾ.ಪಂ., ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ಅಡ್ಡಿಯಾಗುತ್ತಿರುವ ಕರಾವಳಿ ನಿಯಂತ್ರಣ ವಲಯ ನಿಯಮಗಳು,  ಕಾರಣ ನೀಡದೆ ರದ್ದಾಗುತ್ತಿರುವ ಪಡಿತರ ಚೀಟಿ, ಬೀದಿದೀಪ ಅಳವಡಿಸಲು ಬಾಕಿ ಇರುವ ರಸ್ತೆಗಳು, ಬಂದರು ಮತ್ತು ಮೀನುಗಾರಿಕೆ ಇಲಾಖೆ ನಿರ್ಮಿಸಿದ ರಸ್ತೆಯ ಕಳಪೆ ಗುಣಮಟ್ಟ, ತತ್‌ಕ್ಷಣ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳು, ಅಧಿಧಿಕಾರಿಗಳ ಗೆ„ರು, ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್‌ ಕಂಬಗಳ ಸುತ್ತ ಗ್ರಾಮಸ್ಥರು ಮತ್ತು ಪಂಚಾಯತ್‌ ನಡುವೆ ಚರ್ಚೆ ನಡೆಯಿತು. 

ಮಾಜಿ ಅಧ್ಯಕ್ಷ, ಪಂಚಾಯತ್‌ ರಾಜ್‌ ಸಂಪನ್ಮೂಲ ವ್ಯಕ್ತಿ ಎಸ್‌. ಜನಾರ್ದನ, ಮೆಸ್ಕಾಂ ಶಾಖಾಧಿಧಿಕಾರಿ ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸೂಕ್ತ ಮಾಹಿತಿ, ಭರವಸೆ ನೀಡಿ ಚರ್ಚೆಯನ್ನು ಫಲಪ್ರದ ಅಂತ್ಯಕ್ಕೊಯ್ದರು.

ಗ್ರಾ.ಪಂ. ಅಧ್ಯಕ್ಷೆ ಕೆ.ಎ. ಸುಗುಣಾ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಧಿಕಾರಿಯಾಗಿದ್ದ  ಕೈಗಾರಿಕಾ ವಿಸ್ತರಣಾಧಿಧಿಕಾರಿ ಸೀತಾರಾಮ ಶೆಟ್ಟಿ  ಗ್ರಾಮಸಭೆಯ ಮಹತ್ವ ಮತ್ತು ಔಚಿತ್ಯವನ್ನು ವಿವರಿಸಿದರು.

ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್‌ ಹಿಂದಿನ  ಗ್ರಾಮಸಭೆಯ ನಡವಳಿಗಳನ್ನು ಓದಿದರು. ಕರ ಸಂಗ್ರಾಹಕ ಶೇಖರ್‌ ಅನುಪಾಲನಾ ವರದಿ ಮಂಡಿಸಿದರು. ವೈದ್ಯಾಧಿಕಾರಿ ಗಿರೀಶ ಗೌಡ ಆರೋಗ್ಯ ಮಾಹಿತಿ ನೀಡಿ, ಎಚ್‌1ಎನ್‌1 ಕಾಯಿಲೆ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಪ್ರೌಢಶಾಲಾ ಮುಖ್ಯೋ ಪಾಧ್ಯಾಯ ಚಂದ್ರಶೇಖರ ಶೆಟ್ಟಿ, ಕೃಷಿ ಸಹಾಯಕ ಪರಶುರಾಮ, ಶಿಕ್ಷಣ ಇಲಾಖೆಯ ಚಂದ್ರ ನಾಯ್ಕ ಮಾತನಾಡಿದರು.

ಶವಪರೀಕ್ಷೆ, ಊರಿನ ನೈರ್ಮಲ್ಯ, ಅನಾಥರ ಶುಶ್ರೂಷೆಯಂತಹ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ 4ನೇ ದರ್ಜೆಯ ಉದ್ಯೋಗಿ ಗೋಪಾಲ ದೇವಾಡಿಗರನ್ನು ಸಮ್ಮಾನಿಸಲಾಯಿತು. ಭಾರತೀಯ ಜೀವವಿಮಾ ನಿಗಮದ ಬೈಂದೂರು ಶಾಖಾಧಿಧಿಕಾರಿ ಎಲ್‌. ದಿವಾಕರ್‌ ಮರವಂತೆಯನ್ನು ವಿಮಾಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಮತ್ತು ಪಂಚಾಯತ್‌ನ ಸಹಕಾರ ಕೋರಿದರು. ಅಭಿವೃದ್ಧಿ ಅಧಿಧಿಕಾರಿ ಸ್ವಾಗತಿಸಿದರು.  ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ರೋಹಿಣಿ ದೇವಾಡಿಗ, ಸುಗುಣಾ, ನರಸಿಂಹ ಶೆಟ್ಟಿ, ಆಚಾರ್ಯ, ಆನಂದ ಪೂಜಾರಿ, ಮನ್ಸೂರ್‌ ಇಬ್ರಾಹಿಂ, ಅನಿತಾ, ಗ್ರೇಶನ್‌ ಕ್ರಾಸ್ತಾ, ರಾಮಕೃಷ್ಣ ಖಾರ್ವಿ, ಜೀವವಿಮಾ ಅಭಿವೃದ್ಧಿ ಅಧಿಧಿಕಾರಿ ಎ. ಪಿ. ನಾಯಕ್‌, ಪ್ರತಿನಿಧಿಗಳಾದ ಸುಬ್ರಹ್ಮಣ್ಯ ಅವಭೃತ್‌, ರವಿ ಮಡಿವಾಳ ಇದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com