ನವೀಕೃತ ಅಲ್‌ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ

ಕುಂದಾಪುರ: ತಾಲೂಕಿನ ಗುಲ್ವಾಡಿ ಮಾವಿನಕಟ್ಟೆಯಲ್ಲಿ ನಿರ್ಮಿಸಿರುವ ನವೀಕೃತ ಅಲ್‌ ಬದ್ರಿಯಾ ಜುಮ್ಮಾ ಮಸೀದಿಯನ್ನು
 ಸುಲ್ತಾನುಲ್‌ ಉಲಮಾ ಎ.ಪಿ. ಉಸ್ತಾದ್‌ ಉದ್ಘಾಟಿಸಿದರು.


ಮಾವಿನಕಟ್ಟೆಯ ಜನಾಬ್‌ ಜಿ. ಖಾದ್ರಿಮೋನು ಸಾಹೇಬ್‌ ಹಾಗೂ ಮಾವಿನಕಟ್ಟೆ ಜನಾಬ್‌ ಅಲ್‌ಹಾಜ್‌ ಅಬ್ದುಲ್‌ ಮುನಾಫ್‌ ಮಸೀದಿ ಲೋಕಾರ್ಪಣೆಗೈದರು. ಉದ್ಘಾಟನೆ ಅನಂತರ ನಡೆದ ಸೌಹಾರ್ದ ಸಮಾವೇಶದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಜನಾಬ್‌ ಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್‌ ಬೇಕಲ್‌ ವಹಿಸಿದ್ದರು.

ಸೌಹಾರ್ದ ಸಮಾವೇಶವನ್ನು ಮೂಡುಬಿದ್ರೆಯ ಜನಾಬ್‌ ಅಬೂಸುಫ್‌ಯಾನ್‌ ಎಚ್‌.ಐ. ಇಬ್ರಾಹಿಂ ಮದನಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಮಸೀದಿ ಹಾಗೂ ಪ್ರಾರ್ಥನ ಮಂದಿರಗಳು ಅಶಾಂತಿಯ ವಾತಾವರಣವನ್ನು ತಿಳಿಯಾಗಿಸುವ ಶಕ್ತಿ ಪಡೆದಿದೆ. ಇಂದು ಸಮಾಜಕ್ಕೆ ಮನುಕುಲವನ್ನು ಪ್ರೀತಿಸು ಎನ್ನುವ ಸೌಹಾರ್ದಯುತ ಸಂದೇಶದ ಅನಿವಾರ್ಯತೆ ಇದೆ. ಅಲ್ಲದೇ ಸಮಾಜದಲ್ಲಿನ ವಿಭಿನ್ನ ಸಂಸ್ಕೃತಿಯ, ಧರ್ಮದ ಜನರು ಪರಸ್ಪರ ಅನ್ಯೋನ್ಯತೆ, ಸಾಮರಸ್ಯದಿಂದ ಬಾಳಬೇಕಾದ ಅಗತ್ಯ ಇದೆ ಎಂದರು.

ಮೈಸೂರು ಪ್ರಾಂತ್ಯದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಿರ್ದೇಶಕ ಜನಾಬ್‌ ಎನ್‌.ಕೆ. ಮಹಮ್ಮದ್‌ ಶಾಫಿ ಸಅದಿ ಬೆಂಗಳೂರು ದಿಕ್ಸೂಚಿ ಭಾಷಣ ಮಾಡಿದರು. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌.ವಿ. ನರಸಿಂಹಮೂರ್ತಿ ಹಾಗೂ ಉಡುಪಿ ಯು.ಬಿ.ಎಂ. ಜ್ಯುಬಿಲಿ ಚರ್ಚ್‌ನ ರೇ|ಫಾ| ಪ್ರಮೋದ್‌ ಗೋನಿ ಸೌಹಾರ್ದ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಯು.ಆರ್‌. ಸಭಾಪತಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ್‌ ಶೆಟ್ಟಿ, ಸದಾನಂದ ಕಾಂಚನ್‌, ಕೆ. ಸುಧಾಕರ ಶೆಟ್ಟಿ ಬಾಂಡ್ಯ, ಮಲ್ಯಾಡಿ ಶಿವರಾಮ ಶೆಟ್ಟಿ, ಡಾ| ಪಿ. ಬಾಲಕೃಷ್ಣ ಭಂಡಾರಿ, ಅಶೋಕ್‌ ಕುಮಾರ್‌ ಶೆಟ್ಟಿ ಕಾವ್ರಾಡಿ, ಹಾಜಿ ತೌಫೀಕ್‌ ಅಬ್ದುಲ್ಲಾ, ಬಿ.ಎಂ. ಮಮ್ತಾಜ್‌ ಅಲಿ ಕೃಷ್ಣಾಪುರ, ಜಿ. ಸರ್ದಾರ್‌, ಅಬು ಮೊಹಮ್ಮದ್‌ ಮುಝಾವರ್‌, ಮಾವಿನಕಟ್ಟೆ ಬಿ.ಜೆ.ಎಂ. ಅಧ್ಯಕ್ಷ ಜಿ.ಎಂ. ಚೆರಿಯಬ್ಬ ಹಾಜಿ, ಅಸ್ಸಯ್ಯಿದ್‌ ಜಾಫರ್‌ ಅಸ್ಸಖಾಫ್‌ ತಂಙಳ್‌ ಕೋಟೇಶ್ವರ, ಸಯ್ಯಿದ್‌ ಹಮೀದ್‌ ತಂಙಳ್‌ ಉದ್ಯಾವರ, ನೇರಳಕಟ್ಟೆ ನೂರಲ್‌ ಹುದಾ ಮದ್ರಾಸದ ಅಧ್ಯಕ್ಷ ಎನ್‌. ಮಹಮ್ಮದ್‌, ಜಿ. ಖಾದ್ರಿಮೋನು ಸಾಹೇಬ್‌, ಅಲ್‌ಹಾಜ್‌ ಅಬ್ದುಲ್‌ ಮುನಾಫ್‌ ಮಾವಿನಕಟ್ಟೆ, ಗುಲ್ವಾಡಿ ಎಂ.ಜೆ.ಎಂ.ನ ಖತೀಬ್‌ ಉಮರುಲ್‌ ಪಾರೂಕ್‌ ಮಾವಿನಕಟ್ಟೆ ಬಿ.ಜೆ.ಎಂ. ಸದಸ್ಯ ಹಾಜಿ ಜಿ.ಎಂ. ಹಸೈನಾರ್‌ ಉಪಸ್ಥಿತರಿದ್ದರು.

ಮಾವಿನಕಟ್ಟೆ ಅಲ್‌ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಬಿ.ಎ. ಇಸ್ಮಾಯಿಲ್‌ ಮದನಿ ಸ್ವಾಗತಿಸಿದರು. ಸಯ್ಯಿದ್‌ ಖಾಸಿಂ ಖಾಝಿ ಕೋಯ ಖೀರಾತ್‌ ನಡೆಸಿದರು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಪಳ್ಳಿ ಉಸ್ಮಾನ್‌ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com