ಆದರ್ಶ ಗ್ರಾಮ ಯೋಜನೆಯಲ್ಲಿ ಶಿರೂರು ಅಭಿವೃದ್ಧಿ: ಆಸ್ಕರ್

ಶಿರೂರು: ಆದರ್ಶ ಗ್ರಾಮ ಯೋಜನೆ ಮೂಲಕ ಶಿರೂರು ಗ್ರಾಮ ಪಂಚಾಯಿತಿ ಸರ್ವತೋಮುಖ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತದೆ. ಈಗಾಗಲೇ ರಾಜ್ಯಸಭೆ ಸದಸ್ಯರ ನಿಧಿಯಿಂದ ಶಿರೂರು-ಪೇಟೆ, ಕೇರಿ ರಸ್ತೆ ಹಾಗೂ ಕೋಣಮಕ್ಕಿ ರಸ್ತೆಗೆ 50 ಲಕ್ಷ ರೂ. ಅನುದಾನ ನೀಡಲು ಶಿಫಾರಸು ಮಾಡಲಾಗಿದೆ ಎಂದು ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು. ಅವರು ಶಿರೂರು ಪೇಟೆ ವೆಂಕಟರಮಣ ಸಭಾಭವ ನದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಪರಿಚಯಾತ್ಮಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 
     ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ 400 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ಕಳೆದ 2 ವರ್ಷಗಳಿಂದ ನಡೆದಿದೆ. ಶಿರೂರು ಬಂದರು ಅಭಿವೃದ್ಧಿ, ಕಳಿಹಿತ್ಲು ತಡೆಗೋಡೆ ನಿರ್ಮಾಣ ಸೇರಿದಂತೆ ಕರಾವಳಿ ರಸ್ತೆ ಅಭಿವೃದ್ಧಿಗೆ ಪ್ರವಾಸೋಧ್ಯಮ ಇಲಾಖೆಯಿಂದ 1 ಕೋಟಿ ಅನುದಾನ ದೊರೆತಿದೆ. ಈಗಾಗಲೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಂತಿಮ ಹಂತದಲ್ಲಿದೆ. ಆದರ್ಶ ಗ್ರಾಮ ಯೋಜನೆಗೆ ಸಂಸದರ ನಿಧಿಯನ್ನು ಜೋಡಿಸುವ ಬದಲು ಕೇಂದ್ರ ಸರಕಾರ ಹೆಚ್ಚುವರಿ ವಿಶೇಷ ಅನುದಾನ ನೀಡಬೇಕು ಎಂದರು. 
    ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ನಯನಾ, ವಿಶೇಷ ತಹಸೀಲ್ದಾರ್ ಹನುಮೇ ಗೌಡ, ತಾಲೂಕು ಪಂಚಾಯಿತಿ ಇ.ಓ. ಶೇಷಪ್ಪ, ಪಶು ಸಂಗೋಪನಾ ಇಲಾಖೆಯ ಪ್ರಭು ಲಿಂಗಯ್ಯ, ಲೋಕೋಪಯೋಗಿ ಇಲಾಖೆಯ ಚಂದ್ರಶೇಖರ, ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಬ್ಲೋಸಂ ಫರ್ನಾಂಡಿಸ್, ತಾಪಂ ಸದಸ್ಯರಾದ ರಾಜು ಪೂಜಾರಿ, ಸಾವಿತ್ರಿ ನಾರಾಯಣ ಅಳ್ವೆಗದ್ದೆ, ಶಿರೂರು ವೆಲ್‌ಫೇರ್ ಟ್ರಸ್ಟಿನ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್ ಬಾಶು ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ರಾಮ ಮೇಸ್ತ ಸ್ವಾಗತಿಸಿದರು. ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ, ಶಂಕರ ಬಿಲ್ಲವ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com