ದೇವಾಲಯಗಳಿಂದ ನಮ್ಮ ಸಂಸ್ಕೃತಿ ಜೀವಂತ: ಓಂ ಗಣೇಶ್

ಬೈಂದೂರು: ಭಾರತ ದೇಶದಷ್ಟು ವೈವಿಧ್ಯತೆ, ವಿಶೇಷತೆ ಬೇರೆ ಯಾವ ದೇಶದಲ್ಲೂ ಕಾಣಸಿಗುವುದಿಲ್ಲ. ಇಲ್ಲಿರುವ ಲಕ್ಷಾಂತರ ದೇವಾಲಯಗಳಿಂದ ನಮ್ಮ ಸಂಸ್ಕೃತಿ, ಪರಂಪರೆಗಳು ಜೀವಂತವಾಗಿ ಉಳಿದುಕೊಂಡು ದೇಶದ ಸಿರಿವಂತಿಕೆ ಯನ್ನು ಹೆಚ್ಚಿಸಿವೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್‌ ಉಪ್ಪುಂದ ಹೇಳಿದರು.

ಅವರು ಉಪ್ಪುಂದ ಅರಮಕೋಡಿ ಶ್ರೀಈಶ್ವರ ಸೇವಾ ಸಮಿತಿಯ ಉಪ್ಪುಂದೋತ್ಸವ ಸಭಾ ಕಾರ್ಯಕ್ರಮದಲ್ಲಿ ಶುಭಾಸಂಶನೆಗೈದು, ಕೈಲಾಸದಿಂದ ಮಹಾಸಾಗರದ ತನಕ ಹಬ್ಬಿರುವ ಇಡೀ ಭಾರತವೇ ಶಿವಾಲಯವಾಗಿದೆ.ಲೋಕ ಕಲ್ಯಾಣಕ್ಕಾಗಿ ವಿಷವನ್ನು ಕುಡಿದು ನಿಲಕಂಠನೆನಿಸಿಕೊಂಡ ಆ ದೇವರ ಶ್ರಮ ನಮಗೆ ಆದರ್ಶವಾಗಬೇಕು ಎಂದರು.

ಅರಮಕೋಡಿ ಶ್ರೀಈಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು.  ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಮಾನವಹಕ್ಕು ಜನಜಾಗೃತಿ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ದಿಕ್ಸೂಚಿ ಭಾಷಣ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳನ್ನು ಸಮ್ಮಾನಿಸಲಾುತು. ಪ್ರಸನ್ನಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com