ಉಪ್ಪುಂದದಲ್ಲಿ ದೀಪ ಪೂಜನಾ ಕಾರ್ಯಕ್ರಮ

ಉಪ್ಪುಂದ: ಮಡಿಕಲ್‌ ಕಡಲ ತೀರದಲ್ಲಿ ನಡೆಯುತ್ತಿರುವ ಉಪ್ಪುಂದೋತ್ಸವ ಕಾರ್ಯಕ್ರಮದ ಪ್ರಯುಕ್ತ ಯೋಗ, ಸೂರ್ಯ ನಮಸ್ಕಾರ ಯಜ್ಞ ಹಾಗೂ ದೀಪ ಪೂಜನಾ ಕಾರ್ಯಕ್ರಮ ನಡೆಯಿತು.

ಗ್ರಂಥಾಲಯ ಹಾಗೂ ಸೂರ್ಯ ನಮಸ್ಕಾರ ಯಜ್ಞ ಉದ್ಘಾಟಿಸಿ ಆಶೀರ್ವಚನ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಟಲದಾಸ ಸ್ವಾಮೀಜಿಗಳು ಭಕ್ತಿ ಮತ್ತು ಸತ್ಕಾರ್ಯದಿಂದ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಪಂಚದ ಪ್ರತಿ ಚಲನೆಗಳು ದೈವತ್ವ ಹಾಗೂ ಪ್ರಕೃತಿಯನ್ನು ಅವಲಂಬಿಸಿವೆ.  ಸಂಘ ಸಂಸ್ಥೆಗಳ ಚಟುವಟಿಕೆ ಹಾಗೂ ಕ್ರಿಯಾತ್ಮಕ ಚಿಂತನೆಗಳು ಸಮಾಜದ ಬದಲಾವಣೆಗೆ ನಾಂದಿಯಾಗುತ್ತದೆ ಎಂದರು.

ಡಾ| ಯು.ವಿ ಮಯ್ಯ, ಗ್ರಾ.ಪಂ. ಸದಸ್ಯ ಜಯಕರ ಖಾರ್ವಿ, ಶಿಶು ಮಂದಿರದ ಅಧ್ಯಕ್ಷ ಮಂಜು ದೇವಾಡಿಗ, ಉದ್ಯಮಿ ಗೋಕುಲ ಶೆಟ್ಟಿ, ಮಂಜುನಾಥ ಕುಂದೇಶ್ವರ, ಚಂದ್ರಶೇಖರ ದೇವಾಡಿಗ, ಗ್ರಾ.ಪಂ. ಉಪಾಧ್ಯಕ್ಷೆ ನಾಗಮ್ಮಾ ದೇವಾಡಿಗ, ಗೌರವ ಶಿಕ್ಷಕಿ ಗೌರಿ.ಡಿ, ಡಾ| ಅನುರಾಧ ಕಾಮತ್‌, ಧ.ಗ್ರಾ.ಯೋ. ಒಕ್ಕೂಟದ ಅಧ್ಯಕ್ಷೆ ಮೋಹಿನಿ ಕೆ. ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ನವೀನ್‌ ಚಂದ್ರ ಉಪ್ಪುಂದ ಸ್ವಾಗತಿಸಿ, ಪ್ರಸನ್ನ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಅವರು ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com