ಫೆ.28ರಿಂದ ರಾಜ್ಯ ಮಟ್ಟದ ವಾಚನಾಭಿರುಚಿ ಕಮ್ಮಟ

ಕುಂದಾಪುರ: ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಸಮುದಾಯ ಮತ್ತು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಹಕಾರದೊಂದಿಗೆ ರಾಜ್ಯಮಟ್ಟದ ವಾಚನಾಭಿರುಚಿ ಕಮ್ಮಟವು ಫೆ.28 ಹಾಗೂ ಮಾ.1ರಂದು ಭಂಡಾರ್ಕಾರ್ಸ್ ಕಾಲೇಜಿನ ಆಡಿಯೋ ವಿಷುವಲ್ ಹಾಲ್ ನಲ್ಲಿ ನಡೆಯಲಿದೆ.
    ಕಮ್ಮಟವನ್ನು ಫೆಬ್ರವರಿ 28ರ ರಾಷ್ಟ್ರೀಯ ವಿಜ್ಞಾನ ದಿನದಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ ಉದ್ಘಾಟಿಸುವರು. ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ ಉಪಸ್ಥಿತರಿರುವರು.
    ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಪ್ರಸ್ತಾವನೆಗೈಯಲಿದ್ದು, ಕಮ್ಮಟದ ನಿರ್ದೇಶಕ ಡಾ. ಎಂ.ಜಿ. ಹೆಗಡೆ, ಕುಮಟಾ ಆಶಯ ನುಡಿಗಳನ್ನಾಡಲಿದ್ದಾರೆ.
      ಕಮ್ಮಟದ ಮೂಲಕ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ವಿಚಾರವಾದದ ಸ್ವರೂಪ ಮತ್ತು ಅಭಿವ್ಯಕ್ತಿಯ ಕುರಿತು ಸ್ಪಷ್ಟ ಗ್ರಹಿಕೆ ಮತ್ತು ದೃಷ್ಟಿಕೋನಗಳನ್ನು ಒದಗಿಸುವುದು,. ಕನ್ಡಡದ ವೈಚಾರಿಕ ಸಾಹಿತ್ಯ ಪಠ್ಯಗಳನ್ನು ಹಿನ್ನೆಲೆಯಾಗಿ ತೆಗೆದುಕೊಂಡು ಈ ಕಮ್ಮಟದಲ್ಲಿ ನಡೆಸುವ ಚರ್ಚೆಯ ಬೆಳಕಿನಲ್ಲಿ ಓದು ಸಂಸ್ಕೃತಿಯನ್ನು ಮರುರೂಪಿಸುವ ಮತ್ತು ವಾಚನಾಭಿರುಚಿಯನ್ನು ಉದ್ಧೀಪಿಸುವ ಉದ್ಧೇಶವಿದೆ. ಸಾಹಿತ್ಯ ಕೃತಿಯೊಂದರ ಓದಿಗೆ ಪೂರಕವಾದ ಮಾನಸಿಕ ಸಿದ್ಧತೆನ್ನು ರೂಪಿಸುವ ಮತ್ತು ಶಿಬಿರಾರ್ಥಿಗಳ ಗ್ರಹಿಕೆಯ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಯತ್ನವಾಗಿ ಕಮ್ಮಟವು ಕಾಯ್ಕಿಣಿ, ಕಾರಂತ ಸಾರಾ, ಆರ್. ವಿ. ಭಂಡಾರಿಯವರ ಸಾಹಿತ್ಯ ಪಠ್ಯಗಳಿಗೆ ಚರ್ಚೆಯನ್ನು ಮಿತಿಗೊಳಿಸಿಕೊಳ್ಳುತ್ತದೆ ಅಥವಾ ಈ ಸಾಹಿತ್ಯ ಪಠ್ಯಗಳ ಮೂಲಕವೇ ವಿಚಾರ ಸಾಹಿತ್ಯದ ಸಾರ್ಥಕ ಓದಿಗೆ ಪ್ರವೇಶ ಪಡೆಯುತ್ತದೆ.
     ಮಾರ್ಚ್ 1ರಂದು 3:30ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಚಿಂತಕ ಡಾ| ಭಾಸ್ಕರ್ ಮಯ್ಯ, ಸಾಹಿತ್ಯ ಸಮುದಾಯದ ಸಂಚಾಲಕ ವಸಂತರಾಜ ಎನ್. ಕೆ. ಹಾಗೂ ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com