ಫೆ.28: ವಾಚನಾಭಿರುಚಿ : ವಿಚಾರ ಸಾಹಿತ್ಯ ಕಮ್ಮಟ

ಕುಂದಾಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸಾಹಿತ್ಯ ಸಮುದಾಯ ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಇವರ ಸಹಕಾರದೊಂದಿಗೆ ವಾಚನಾಭಿರುಚಿ : ವಿಚಾರ ಸಾಹಿತ್ಯ ಎಂಬ ಕಮ್ಮಟವನ್ನು ಫೆ.28 ಹಾಗೂ ಮಾ. 1ರಂದು ಭಂಡಾರ್ಕಾರ್ಸ್ ಕಾಲೇಜಿನ ಅಡಿಯೋ ವಿಷುವಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ. 
    ಫೆ.28ರ ಬೆಳಿಗ್ಗೆ 10:30 ಉದ್ಘಾಟನೆಗೊಳ್ಳಲಿರುವ ಕಮ್ಮಟದಲ್ಲಿ ವಿಚಾರವಾದದ ಸ್ವರೂಪ ಮತ್ತು ಅಭಿವ್ಯಕ್ತಿಯನ್ನು ಕನ್ನಡದ ವೈಚಾರಿಕ ಸಾಹಿತ್ಯ ಪಠ್ಯಗಳನ್ನು ಹಿನ್ನೆಲೆಯಾಗಿ ತೆಗೆದುಕೊಂಡು ಈ ಕಮ್ಮಟದಲ್ಲಿ ಚರ್ಚಿಸಲಾಗುವುದು. ಈ ಬೆಳಕಿನಲ್ಲಿ ಓದು ಸಂಸ್ಕೃತಿಯನ್ನು ಮರುರೂಪಿಸುವ ಮತ್ತು ವಾಚನಾಭಿರುಚಿಯನ್ನು ಉದ್ಧೀಪಿಸುವ ಉದ್ಧೇಶವನ್ನು ಕಮ್ಮಟ ಹೊಂದಿದೆ. ಒಟ್ಟಾರೆಯಾಗಿ, ಸಾಹಿತ್ಯ ಕೃತಿಯೊಂದರ ಓದಿಗೆ ಪೂರಕವಾದ ಮಾನಸಿಕ ಸಿದ್ಧತೆನ್ನು ರೂಪಿಸುವ ಮತ್ತು ಗ್ರಹಿಕೆಯ ಸಾಧ್ಯತೆಗಳನ್ನು ವಿಸ್ತರಿಸುವ ಉದ್ಧೇಶದಿಂದ ಹಮ್ಮಿಕೊಳ್ಳಲಾಗಿರುವ ಕಮ್ಮಟದಲ್ಲಿ ಗೌರೀಶ್ ಕಾಯ್ಕಿಣಿ, ಶಿವರಾಮ ಕಾರಂತ, ಆರ.ವಿ ಭಂಡಾರಿ, ಸಾ. ರಾ. ಅಬೂಬಕರ್‍ರವರುಗಳ ಸಾಹಿತ್ಯ ಓದುವಿಕೆ ಇರುತ್ತದೆ.
     ಕಮ್ಮಟದಲ್ಲಿ ಭಾಗವಹಿಸಲಿಚ್ಛಿಸುವ ಭಾಷಾ ಶಿಕ್ಷಕರು, ಉಪನ್ಯಾಸಕರು, ಪದವಿ ಅಥವಾ ಅದಕ್ಕೂ ಮೇಲ್ಪಟ್ಟ ತರಗತಿಗಳಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳು, ಸಾಹಿತ್ಯಾಭಿರುಚಿಯುಳ್ಳ ಸಹೃದಯರು ಕಮ್ಮಟದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
   ಭಾಗವಹಿಸುವ ಎಲ್ಲರಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪೂರಕ ಸಾಹಿತ್ಯ ಸಾಮಗ್ರಿಗಳ ಕಿಟ್ ಮತ್ತು ಪ್ರಮಾಣ ಪತ್ರವನ್ನು ನೀಡುತ್ತದೆ. ಊಟ, ವಸತಿ ಉಚಿತವಾಗಿರುತ್ತದೆ. ಮತ್ತಷ್ಟು ಮಾಹಿತಿಗೆ ಕರೆಮಾಡಿ: 9481509699 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com