ವಿಶ್ವಕರ್ಮ ಕಾರ್ಪೆಂಟರ್‌ ಯೂನಿಯನ್‌ ಉದ್ಘಾಟನೆ

ಕುಂದಾಪುರ: ದೇಶದ ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ ಅಪಾರ. ಜಗತ್ತಿಗೆ ವಿಶ್ವಕಲೆ ಅರ್ಪಣೆ ಮಾಡಿದ ವಿಶ್ವಕರ್ಮ ಸಮುದಾಯದವರ ಕೊಡುಗೆ ದೇಶದ ದೊಡ್ಡ ಸಂಪತ್ತು ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ಅವರು ಕುಂದಾಪುರದ ನೆಹರೂ ಮೈದಾನದಲ್ಲಿ ರವಿವಾರ ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್‌ ಯೂನಿಯನ್‌ ಉದ್ಘಾಟಿಸಿ ಮಾತನಾಡಿದರು.

ಸಂಘಟನೆ ಮುಖ್ಯ

ಪ್ರತಿಯೊಂದಕ್ಕೂ ಸಂಘಟನೆ ಬಹಳ ಮುಖ್ಯ. ಸಂಘಟನೆ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಅಲ್ಲದೇ ಸಂಘಟನೆಗಳು ನಿರ್ದಿಷ್ಟ ಗುರಿ ಉದ್ದೇಶ ಹೊಂದಿದ್ದರೆ ಯಶಸ್ಸು ಪಡೆಯಲು ಸಾಧ್ಯ. ಸಮಾಜದ ಬಲವರ್ಧನೆಯೊಂದಿಗೆ ಪರಸ್ಪರ ಪ್ರೀತಿ ಬೆಸೆಯುವ ಉದ್ದೇಶ ಸಂಘಟನೆಯಿಂದ ಈಡೇರಿಸಲು ಸಾಧ್ಯ. ಕುಂದಾಪುರದ ಈ ಸಂಘಟನೆ ಉತ್ತಮ ಧ್ಯೇಯ ಉದ್ದೇಶಗಳನ್ನು ಹೊಂದಿದ್ದು, ಯಶಸ್ವಿಯಾಗಲಿದೆ ಎಂದರು.

ರಾಷ್ಟ್ರೀಯ ಶಿಲ್ಪಗುರು ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮಿ¾àನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಗುರುತು ಚೀಟಿ ಬಿಡುಗಡೆಗೊಳಿದರು. ಮೂಡುಬಿದ್ರೆ ಎಸ್‌.ಕೆ.ಎಫ್‌. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ಯ ದರಪಟ್ಟಿ ಬಿಡುಗಡೆಗೊಳಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ ಅಡ್ಯಂತಾಯ ದಾಖಲಾತಿಗಳನ್ನು ಹಸ್ತಾಂತರಿಸುವ ಮೂಲಕ ನೂತನ ಘಟಕಗಳಿಗೆ ಚಾಲನೆ ನೀಡಿದರು. ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಅಲೆವೂರು ಯೋಗೀಶ ಆಚಾರ್ಯ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಆಚಾರ್ಯ ಬಡಾಕೆರೆ, ಶ್ರೀಮತ್‌ ಆನೆಗುಂದಿ ಪ್ರತಿಷ್ಠಾನ ಮಹಾಸಂಸ್ಥಾನ ಕಟಪಾಡಿ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಬೆಂಗಳೂರು ವಿಶ್ವಕರ್ಮ ಕಾಷ್ಠಶಿಲ್ಪ ಸಭಾದ ಅಧ್ಯಕ್ಷ ಮೋಹನ ಆಚಾರ್ಯ, ಉದ್ಯಮಿ ಕೆ. ನಾಗರಾಜ ರಾವ್‌, ಕುಂದಾಪುರ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘದ ಅಧ್ಯಕ್ಷ ಆನಂದ ಆಚಾರ್ಯ ವಕ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಳಿ ಚಂದ್ರಯ್ಯ ಆಚಾರ್ಯ ಮತ್ತು ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತ ಜಯರಾಮ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್‌ ಯೂನಿಯನ್‌ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ ಬೀಜಾಡಿ ಪ್ರಾಸಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಜಿ.ವಿ. ವೆಂಕಟೇಶ್‌ ಆಚಾರ್ಯ ಸ್ವಾಗತಿಸಿದರು. ದಾಮೋದರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com