ವಿಶ್ವಕರ್ಮ ವಿದ್ಯಾರ್ಥಿ ವೇತನ ವಿತರಣೆ, ಸಮ್ಮಾನ

ಬೈಂದೂರು: ಉಪ್ರಳ್ಳಿ  ಶ್ರೀ ಕಾಳಿಕಾಂಬಾ ಎಜುಕೇಶನ್‌ ಟ್ರಸ್ಟ್‌ (ರಿ.) ಇದರ ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭ ಬೈಂದೂರಿನ ರೋಟರಿ ಭವನದಲ್ಲಿ  ಜರಗಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಸುರೇಶ ಆಚಾರ್ಯ ಮುಂಬೈ,  ಉಪ್ರಳ್ಳಿಯ  ಶ್ರೀ ಕಾಳಿಕಾಂಬೆಯು ನೀಡಿದ  ಶ್ರೀರಕ್ಷೆಯಿಂದ  ಈ ಕಾರ್ಯಕ್ರಮದಲ್ಲಿ  ಭಾಗಿಯಾಗಿ  ತನ್ನಿಂದ ಆದಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುತ್ತೇನೆ ಎಂದರು. ಅಧ್ಯಕ್ಷತೆಯನ್ನು ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ಅಶೋಕ್‌  ಆಚಾರ್ಯ ವಹಿಸಿದ್ದರು.
        ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಳಿ ಚಂದ್ರಯ್ಯ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಟ್ರಸ್ಟ್‌ಗೆ ಅತ್ಯಂತ ಹೆಚ್ಚು ಧನ ಸಹಾಯ ನೀಡಿದ ಸುರೇಶ್‌ ಆಚಾರ್ಯ ಮುಂಬೈ ಅವರನ್ನು ಗೌರವಿಸಲಾಯಿತು. ಸೋಮನಾಥನ್‌ ಆರ್‌. ನಾರಾಯಣ ಆಚಾರ್ಯ ಮಾಡ  ಉಪಸ್ಥಿತರಿದ್ದರು. ಟ್ರಸ್ಟ್‌ನ  ಉಪಾಧ್ಯಕ್ಷ  ತ್ರಾಸಿ ಸುಧಾಕರ ಆಚಾರ್ಯ ಸ್ವಾಗತಿಸಿದರು. 
     ಕೋಶಾಧಿಕಾರಿ ಯು.ಕೆ.ಎಸ್‌ ಸೀತಾ ರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಧಾಕರ ಆಚಾರ್ಯ ವರದಿ ವಾಚಿಸಿದರು.  ಚಂದ್ರಯ್ಯ ಆಚಾರ್ಯ ಅವರು  ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿದರು. ದಿನೆಶ್‌ ಆಚಾರ್ಯ ಚೇಂಪಿ ಪರಿಚಯಿಸಿದರು. ಕೆ.ಎನ್‌.ವೆಂಕಟೇಶ ಆಚಾರ್ಯ  ಕಾರ್ಯಕ್ರಮ ನಿರೂಪಿಸಿದರು. ಬಿ. ಜನಾರ್ದನ ಆಚಾರ್ಯ ಬೈಂದೂರು ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com