ಲೇಖಕಿ ಡಾ| ಪಾರ್ವತಿ ಜಿ.ಐತಾಳ್‌ರ ಒಡಲ ಬೆಂಕಿ ಕಾದಂಬರಿ ಬಿಡುಗಡೆ

ಕುಂದಾಪುರ: ಕಾದಂಬರಿ ಬದುಕಿನ ಒಂದು ಸಮಗ್ರ ಚಿತ್ರಣವನ್ನು ಕಲಾತ್ಮಕವಾಗಿ ಕಟ್ಟಿ ಕೊಡುವ ಸಾಹಿತ್ಯ ಪ್ರಕಾರ. ಇಂದಿನ ವ್ಯಸ್ತ ಜೀವನಕ್ರಮದಲ್ಲಿ ಕಾದಂಬರಿ ಬರೆಯುವುದಿರಲಿ, ಓದುವುದಕ್ಕೂ ಸಮಯ ಸಿಕ್ಕದವರೇ ಹೆಚ್ಚು. ಆದ್ದರಿಂದಲೇ ಸಾಹಿತಿಗಳೂ ಓದುಗರೂ ಹೆಚ್ಚಾಗಿ ಸಣ್ಣ ಕಥಾ ಪ್ರಕಾರವನ್ನೇ ನೆಚ್ಚಿಕೊಳ್ಳುತ್ತಾರೆ. ಆದರೆ ಸಣ್ಣ ಕಥೆಗಳು ಬದುಕಿನ ತುಣುಕುಗಳನ್ನಷ್ಟೇ ಕೊಡಬಲ್ಲವು. ಕಾದಂಬರಿಯ ವ್ಯಾಪ್ತಿ-ವೈಶಾಲ್ಯಗಳನ್ನು ನಾವು ಅಲ್ಲಿ ಕಾಣಲಾರೆವು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಹೇಳಿದರು.
ಕುಂದಾಪುರದ ಜನಪ್ರತಿನಿಧಿ ವಾರಪತ್ರಿಕೆಯ ಆಶ್ರಯದಲ್ಲಿ ನಡೆದ ಲೇಖಕಿ ಡಾ|ಪಾರ್ವತಿ ಜಿ.ಐತಾಳ್ ಅವರು ರಚಿಸಿರುವ ಸಾಮಾಜಿಕ ಕಾದಂಬರಿ ಒಡಲ ಬೆಂಕಿ ಕೃತಿಯನ್ನು  ಅವರು  ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಯ ಲೇಖಕಿ ಡಾ. ಪಾರ್ವತಿ ಜಿ.ಐತಾಳ್ ಮಾತನಾಡಿ, ಕಾದಂಬರಿಯ ರಚನೆಯ ಹಿಂದಿನ ತಮ್ಮ ಅನುಭವಗಳನ್ನು ವಿವರಿಸಿ, ಪ್ರಕಾಶಕರಾದ ಬೆಂಗಳೂರಿನ ಹೇಮಂತ ಪ್ರಕಾಶನದವರನ್ನು, ಮುನ್ನುಡಿ ಬರೆದ ಹಿರಿಯ ವಿಮರ್ಶಕಿ ಎಲ್.ವಿ.ಪ್ರೊ.ಮಾಲತಿ ಪಟ್ಟಣ ಶೆಟ್ಟಿಯವರನ್ನು ನೆನಪಿಸಿಕೊಂಡರು.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com