ಯಕ್ಷಗಾನಕ್ಕೆ ನಿರ್ದೇಶಕ ಬೇಕು:ಚಿನ್ನಪ್ಪ ಗೌಡ

ಕೋಟೇಶ್ವರ: ಯಕ್ಷಗಾನದ ಸಾರ್ಥಕತೆ ಅದರ ಪ್ರದರ್ಶನದಲ್ಲಿದೆ. ಅದನ್ನು ಅರ್ಥಪೂರ್ಣವಾಗಿಸಬೇಕು.  ಹಾಗಾಗಿ ಯಕ್ಷಗಾನದ ಸಮಗ್ರ ತಿಳಿವಳಿಕೆ ಇರುವ ನಿರ್ದೇಶಕರು  ಯಕ್ಷಗಾನಕ್ಕೆ ಬೇಕು. ಯಕ್ಷಗಾನ ಪ್ರದರ್ಶನದ ಅಂದ ಕೆಡದಂತೆ ಬದ್ಧತೆ ಇಟ್ಟುಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಕೆ. ಚಿನ್ನಪ್ಪ ಗೌಡ ಹೇಳಿದರು.

ಕೋಟೇಶ್ವರದ ನಮ್ಮ ಕಲಾಕೇಂದ್ರದ ಆಶ್ರಯದಲ್ಲಿ ಫೆ. 1 ರ ರಾತ್ರಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಏರ್ಪಡಿಸಲಾದ 7 ನೇ ವರುಷದ 7 ದಿವಸಗಳ ಯಕ್ಷ ಹಬ್ಬ-2015 ಯಕ್ಷ ಸಂಭ್ರಮ ಸಪ್ತಾಹವನ್ನು ಚಂಡೆ ವಾದನದೊಡನೆ ಉದ್ಘಾಟಿಸಿ ಅವರು ಮಾತನಾಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರು ಮಾತನಾಡಿ ಹವ್ಯಾಸಿ ತಂಡಗಳು ಯಕ್ಷಗಾನ ಪರಂಪರೆ  ಉಳಿವಿಗಾಗಿ ನಡೆಸುತ್ತಿರುವ ಪ್ರಯತ್ನ ಅರ್ಥಪೂರ್ಣ. ಅದರ ಸೊಗಸನ್ನು ಉಳಿಸುವಲ್ಲಿ  ಯುವ ಯಕ್ಷಗಾನ ಕಲಾವಿದರು ಶ್ರಮಿಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅವರು  ಮಾತನಾಡುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನದ ಕೊಡುಗೆಯನ್ನು ವಿವರಿಸಿದರಲ್ಲದೇ ಧರ್ಮದ ತಿರುಳನ್ನು ಬಿಡಿಸಿ ಹೇಳುವ ಯಕ್ಷಗಾನ ಪರಂಪರೆಯ ಅಂತಃಸತ್ವಕ್ಕೆ ಕುಂದುಂಟಾಗದಂತೆ ಸಮಗ್ರವಾಗಿ ಬೆಳೆಯಬೇಕೆಂದರು.

ವಿದ್ಯುತ್‌ ಗುತ್ತಿಗೆದಾರ ಕೆ. ಆರ್‌. ನಾಯ್ಕ, ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಕೆ. ದಿನಕರ ಶೆಟ್ಟಿ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜಶೇಖರ ಶೆಟ್ಟಿ ಮಾರ್ಕೋಡು, ಗೌರವಾಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಉಪಸ್ಥಿತರಿದ್ದರು.

ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಮದ್ದಳೆಗಾರ ಚಂದ್ರಯ್ಯ ಆಚಾರ್‌ ಹಾಲಾಡಿ, ಚಂಡೆವಾದಕ ಕೃಷ್ಣಯ್ಯ ಆಚಾರ್‌ ಬಿದ್ಕಲ್‌ಕಟ್ಟೆ ಅವರನ್ನು ಅತಿಥಿಗಳು ಗೌರವಿಸಿದರು.

ನಮ್ಮ ಕಲಾ ಕೇಂದ್ರ (ರಿ.) ಇದರ ಅಧ್ಯಕ್ಷ ಶಿಕ್ಷಕ ರಂಜಿತ್‌ ಕುಮಾರ್‌ ಶೆಟ್ಟಿ ವಕ್ವಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಿಕ್ಷಕ ಕೆ. ಉದಯ ಕುಮಾರ್‌ ಶೆಟ್ಟಿ  ಕಾಳಾವರ ಧನ್ಯವಾದ ಸಮರ್ಪಿಸಿದರು. ಸಂದೇಶ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com