ಪಂಚಗಂಗಾ ಸಹಕಾರಿ ಸಂಘ: ಅಭಿನಂದನಾ ಸಮಾರಂಭ

ಹೆಮ್ಮಾಡಿ: ಇಲ್ಲಿನ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆಯಿಲ್ಲದೇ ಸರ್ವಾನುಮತದ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಸಂಘದ ಹೆಮ್ಮಾಡಿಯ ಪ್ರಧಾನ ಕಚೇರಿಯಲ್ಲಿ ಜರಗಿತು.

ನೂತನ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ, ಉಪಾಧ್ಯಕ್ಷ ಅಂತೋನಿ ಲೂಯಿಸ್‌ ಹಾಗೂ ಆಡಳಿತ ಮಂಡಳಿ ನೂತನ ಸದಸ್ಯರಾದ ಸಂತೋಷ್‌ಕುಮಾರ್‌ ಶೆಟ್ಟಿ ಹಕ್ಲಾಡಿ, ಆನಂದ ಪಿ ಎಚ್‌., ಶರತ್‌ಕುಮಾರ್‌ ಶೆಟ್ಟಿ, ಚಂದ್ರಶೇಖರ ಪೂಜಾರಿ, ಸಾಧು ಎಸ್‌. ಬಿಲ್ಲವ, ಚಂದ್ರಮತಿ ಶೆಟ್ಟಿ, ಸಂತೋಷ್‌ಕುಮಾರ್‌ ಶೆಟ್ಟಿ ತೋಟಬೈಲು, ಅನಂತ ಮೊವಾಡಿ ಮತ್ತು ಚಂದ್ರ ನಾಯ್ಕ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜು ದೇವಾಡಿಗ ಅವರು ಸಂಘದ ಸದಸ್ಯರ ಬೇಡಿಕೆಗೆ
ಸ್ಪಂದಿಸುವುದರೊಂದಿಗೆ ಸಂಘವನ್ನು  ಪ್ರಗತಿ ಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು. ಚುನಾವಣಾಧಿಧಿಕಾರಿ ಶ್ರೀನಿವಾಸ ಬಿಡುವಾಳ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಧಿಕಾರಿ ಅಶೋಕ್‌ ಶೆಟ್ಟಿ ಅವರು ಸ್ವಾಗತಿಸಿದರು. ಶಶಿಧರ ಹೆಬ್ಟಾರ್‌ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com