ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ

ಕುಂದಾಪುರ: ಸಾಕಷ್ಟು ಅವಕಾಶಗಳು ಯುವಜನತೆಯ ಮುಂದಿದೆ. ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು ಎಂದು ಇಂಡಿಯನ್‌ ಒವರ್‌ಸೀಸ್‌ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ರಾಕೇಶ್‌ ಕೆ.ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಿಮ್ಮ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ಸೌಲಭ್ಯಗಳು ನಿಮ್ಮ ಕೈಗೆ ಎಟುಕುತ್ತಿವೆ. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಸಮಾಜದ ಒಳ್ಳೆಯ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕು ಜೊತೆಯಲ್ಲಿ ನಿಮ್ಮ ಸಾಧನೆಗೆ ಪ್ರೇರಣೆಯಾಗುವ ಗುರುಗಳಿಗೆ ಚಿರಋಣಿಯಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಇದರ ಆಡಳಿತಾಧಿಧಿಕಾರಿ ಡಾ| ಎಚ್‌.ಶಾಂತಾರಾಮ್‌ ಮಾತನಾಡಿ ವಿದ್ಯಾರ್ಥಿಗಳು ಸಂಸ್ಥೆಯಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡ ನಿಮ್ಮ ಗುರಿಯನ್ನು ಸಾಧಿಧಿಸಬೇಕು. ತನ್ಮೂಲಕ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕು. ಯಾಕೆಂದರೆ ಎಲ್ಲರ ಪರಿಶ್ರಮದಿಂದ ಈ ಸಂಸ್ಥೆ ಬೆಳೆದಿದೆ. ಅದನ್ನು ಮುಂದುವರಿಸಿ ಕೊಂಡು ಹೋಗುವ ಜವಾಬ್ದಾರಿ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನಿಂದ ಸೇವಾ ನಿವೃತ್ತಿ ಪಡೆದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ|ನಾರಾಯಣರಾವ್‌ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ  ಪ್ರೊ|ಕೆ.ಶಾಂತಾರಾಮ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರ್ಯಾಂಕ್‌ ವಿಜೇತ ವಿದ್ಯಾರ್ಥಿಗಳಾದ ಪ್ರಸಾದ್‌, ಭವ್ಯಶ್ರೀ, ಶೈಲಶ್ರೀ, ಸುನೀತಾ, ನಿಲೋಫರ್‌, ದಿವ್ಯಾ ಮೆರಿಟಾ ಫೆರ್ನಾಂಡಿಸ್‌ ಎನ್‌.ಸಿ.ಸಿ. ವಿದ್ಯಾರ್ಥಿಗಳಾದ ವೀರೇಂದ್ರ ಮೊಗವೀರ, ಶೇಖ್‌ ಹಿದಾಯಿತುಲ್ಲಾ, ಮಧುಸೂಧನ, ಶ್ರೀನಿಧಿಧಿ ಕಿಣಿ ಮತ್ತು ಆದಿತ್ಯ ಜೆ., ಎಂ.ಎಸ್‌.ಕಾವ್ಯಾ, ಪೃಥ್ವಿ, ಸ್ವಾತಿ ಆಚಾರ್ಯ ಅವರನ್ನು ಗೌರವಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com