ಬಿಪಿಲ್ ಪಂದ್ಯಾಟ: ಸ್ವಾಮಿ ಗಂಗೊಳ್ಳಿ ತಂಡ ಪ್ರಥಮ

ಬೈಂದೂರು: ಎರಡು ದಿನಗಳ ಕಾಲ ನಡೆದ 60ಗಜಗಳ ಬಿಪಿಎಲ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಇಲ್ಲಿನ ಗಾಂಧಿ ಮೈದಾನದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಬಿ. ಎಂ. ನಾಗರಾಜ ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಡಿ. ಪಡುವರಿ, ಮಾಜಿ ಜಿ.ಪಂ ಸದಸ್ಯ ಮದನ್ ಕುಮಾರ್, ಯಡ್ತರೆ ಗ್ರಾ.ಪಂ. ನ ಉಪಾಧ್ಯಕ್ಷೆ ಕಲಾವತಿ ನಾಗರಜ ಗಾಣಿಗ, ಲಾವಣ್ಯ  ಬೈಂದೂರಿ ಗಣೇಶ್ ಕಾರಂತ, ಗಿರೀಶ್ ಬೈಂದೂರು, ಮಹಾತ್ಮ ಜ್ಯೋತಿ ಬಾಪುಲೆ ಕೊರಗರ ಯುವ ಕಲಾ ವೇದಿಕೆ ಅಧ್ಯಕ್ಷ ಲಕ್ಷ್ಮಣ ಕೆ. ಕೊರಗ ಮೊದಲಾದವರು ವೇದಿಕೆಯಲ್ಲಿದ್ದರು.
     ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಸ್ವಾಮಿ ಗಂಗೊಳ್ಳಿ ತಂಡ ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಆಗಿ ಆರಾಧನಾ ಪಡುಕೋಣೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡರೆ, ವೀರ ಕೇಸರಿ ಗಂಗೊಳ್ಳಿ ತೃತೀಯ ಸ್ಥಾನವನ್ನು ಪಡೆಯಿತು. ಕ್ರೀಡಾ ಪಟುಗಳಿಗೆ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಮುಂತಾದ ಬಹುಮಾನಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಬ್ಬಡ್ಡಿ ಪಂದ್ಯಾಟದಲ್ಲಿ ನಿರಂತರಾಗಿ ಬಹುಮಾನ  ಗೆದ್ದ  ಯೋಜನಾನಗರದ ತಂಡವನ್ನು ಸನ್ಮಾನಿಸಲಯಿತು. ಅಂಗವಿಕಲರಿಗೆ ಚೆಕ್ ವಿತರಿಸುವ ಮೂಲಕ ಧನಸಹಾಯ ಮಾಡಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com