ಮರವಂತೆ ಹಿ.ಪ್ರಾ. ಶಾಲೆಗೆ ಪುಸ್ತಕ ಕೊಡುಗೆ

ಮರವಂತೆ: ಕುಂದಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಸ್ಥಳೀಯ ಪ್ರಕಟಿತ ಪುಸ್ತಕಗಳ ವಿತರಣಾ ಅಭಿಯಾನದ ಅಂಗವಾಗಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ. ಶುಭಾ ಮರವಂತೆ ತಾವು ಪ್ರಾಥಮಿಕ ಶಿಕ್ಷಣ ಪಡೆದ ಮರವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 5,೦೦೦ ಮೌಲ್ಯದ ಪುಸ್ತಕಗಳನ್ನು ಶನಿವಾರ ಕೊಡುಗೆಯಾಗಿತ್ತರು. ಪುಸ್ತಕಗಳನ್ನು ಸ್ವೀಕರಿಸಿದ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೃತಜ್ಞತೆ ಸಲ್ಲಿಸಿದರು. 

      ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಕಾರ್ಯದರ್ಶಿ ಡಾ. ಕನರಾಡಿ ವಾದಿರಾಜ ಭಟ್ ಕುಂದಾಪುರ ತಾಲೂಕಿನಲ್ಲಿ ಸ್ಥಳೀಯ ಲೇಖಕರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಏಳೆಂಟು ಪ್ರಕಾಶನ ಸಂಸ್ಥೆಗಳಿವೆ. ಅವುಗಳು ಪ್ರಕಟಿಸುತ್ತಿರುವ ಪುಸ್ತಕಗಳನ್ನು ದಾನಿಗಳ ನೆರವಿನಿಂದ ಖರೀದಿಸಿ, ಶಾಲೆಗಳಿಗೆ ವಿತರಿಸುವುದು ಅಭಿಯಾನದ ಉದ್ದೇಶ. ಈಗಾಗಲೆ 20 ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ. ’ಪುಸ್ತಕ ಪ್ರೀತಿ ಜೀವನ ಸಂಸ್ಕೃತಿ’ ಎಂಬ ಘೋಷಣೆಯಡಿ ನಡೆಸುತ್ತಿರುವ ಈ ಅಭಿಯಾನದ ಯಶಸ್ಸಿಗೆ ದಾನಿಗಳು ಮುಂದಾಗಬೇಕು. ಶಿಕ್ಷಕರು ಶಾಲೆಯಲ್ಲಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವಂತೆ ಪ್ರೇರೇಪಿಸಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಶಾಲಾ ಅಮೃತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಶಾಲೆಯ ಹಿಂದಿನ ವಿದ್ಯಾರ್ಥಿಗಳು ಡಾ. ಶುಭಾ ಅವರ ಉಪಕ್ರಮವನ್ನು ಅನುಸರಿಸಬೇಕು ಎಂದರು. 
   ಶಿಕ್ಷಕಿ ಸೀತಾ ಜೋಗಿ ವಂದಿಸಿದರು. ಸೀತಾರಾಮ ಶೆಟ್ಟಿ ನಿರೂಪಿಸಿದರು. ಅಭಿವೃದ್ಧಿ ಸಮಿತಿಯ ಸದಸ್ಯರಾದ ಮೀನಾಕ್ಷಿ, ಉಮೇಶ ಖಾರ್ವಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com