ಬಿಪಿಲ್ ಪಂದ್ಯಾಟಕ್ಕೆ ಶಾಸಕರಿಂದ ಚಾಲನೆ

ಬೈಂದೂರು: ಪಂದ್ಯಾಟಕ್ಕಾಗಿ ರಾಜ್ಯಮಟ್ಟದಲ್ಲಿ ಗುರುತಿಸಬಹುದಾದ ಕ್ರೀಡಾಂಗಣವನ್ನು ಬೈಂದೂರಿನಲ್ಲಿ ಸಜ್ಜುಗೊಳಿಸಿರುವುದು ಅಭಿನಂದನಾರ್ಹ. ಉತ್ತಮ ಕ್ರೀಡಾಕೂಟಗಳ ಆಯೋಜನೆಯ ಮೂಲಕ ಕ್ರೀಡಾಳುಗಳ ಪ್ರತಿಭೆಯ ಹೊರಬರುವಂತಾಗಲಿ ಎಂದು  ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
     ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ 60 ಗಜಗಳ ಐಪಿಎಲ್ ಮಾದರಿಯ ಬೈಂದೂರು ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. 
  ಮಾನವ ಹಕ್ಕು ಪರಿಷತ್ ನ ರಾಜ್ಯ ಉಪಾಧ್ಯಕ್ಷ ಬಿ.ಜಿ. ಲಕ್ಷ್ಮೀಕಾಂತ ಬೆಸ್ಕೂರು ಬಿಪಿಎಲ್ ಪಂದ್ಯಾಟದ ಧ್ವಜಾರೋಹಣಗೈದರು. ಮಾಜಿ ಜಿ.ಪಂ ಅಧ್ಯಕ್ಷ ಎಸ್. ರಾಜು ಪೂಜಾರಿ ಟ್ರೋಫಿ ಅನಾವರಣಗೊಳಿಸಿದರು. 
      ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯ ಬಾಬು ಹೆಗ್ಡೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ನಾಗರಾಜ ಗಾಣಿಗ, ಸೌಖ್ಯ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಿಯಾಜ್ ಅಹಮ್ಮದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.






ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com