ಬೈಂದೂರು ತಾಲೂಕಿಗೆ ಆಗ್ರಹಿಸಿ ಪ್ರತಿಭಟನೆ

ಬೈಂದೂರು: ಇಲ್ಲಿನ ಬೈಪಾಸ್ ಬಳಿ ಬೈಂದೂರನ್ನು ತಾಲೂಕು ಕೇಂದ್ರವಾಗಿ ಬಜೆಟ್ ನಲ್ಲಿ ಘೋಷಿಸಬೇಕೆಂದು ಆಗ್ರಹಿಸಿ ಕುಂದಾಪುರ ತಾಲೂಕು ರೈತಸಂಘ, ಬೈಂದೂರು ರಿಕ್ಷಾ ಟೆಂಪೋ ಯೂನಿಯನ್  ಹಾಗೂ ಬೈಂದೂರು ತಾಲೂಕು ಹೋರಾಟ ಸಮಿತಿ ಹಾಗೂ ಇನ್ನಿತರ ಸಂಘಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. 

ರೈತಸಂಘದ ಅಧ್ಯಕ್ಷ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ ಕಳೆದ ಕೆಲವು ದಶಕಗಳಿಂದ ಬೈಂದೂರು ತಾಲೂಕು ಬೇಡಿಕೆಯನ್ನಿಟ್ಟಿದ್ದೇವೆ. ಬಿಜೆಪಿ ಸರಕಾರದ ಬಜೆಟ್ ನಲ್ಲಿ ಘೋಷಿಸಿದರೂ ಕೂಡ ಅದನ್ನು ತಡೆಹಿಡಿಯಲಾಯಿತು. ಈ ಭಾರಿಯ ಬಜೆಟ್ ನಲ್ಲಿ ಬೈಂದೂರು ತಾಲೂಕು ಘೋಷಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟನ್ನು ಸಂಘಟಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಬೈಂದೂರು ರಿಕ್ಷಾ, ಟೆಂಪು ಯೂನಿಯನ್ ನ ಅಧ್ಯಕ್ಷ ಸುರೇಶ್ ಬಟವಾಡಿ, ತಾಲೂಕು ಹೋರಾಟ ಸಮಿತಿಯ ವಸಂತ ಹೆಗ್ಡೆ, ಗೋಪಾಲ ಗಾಣಿಗ ಮೊದಲಾದವರು ಉಪಸ್ಥಿತಿರಿದ್ದರು.

ನಿನ್ನೆಯೂ ಈ ಬಗ್ಗೆ ಬೈಂದೂರು ವಿಶೇಷ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಬಜೆಟ್ ನಲ್ಲಿ ಬೈಂದೂರು ತಾಲೂಕು ಘೋಷಣೆಯಾಗುವುದು  ಎಂಬ ಭರವಸೆ ಜನರಲ್ಲಿತ್ತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com