ಡಿವೈಎಫ್ಐನಿಂದ ಭಗತ್ ಸಿಂಗ್ ಹುತಾತ್ಮ ದಿನಾಚರಣೆ

ಕುಂದಾಪುರ: ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಡಿವೈಎಪ್ಐ ಸಂಘಟನೆಯಿಂದ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯನ್ನು ಭಗತ್ ಸಿಂಗ್ ಚಿತ್ರವಿರುವ ಮುಖವಾಡ ಧರಿಸಿ, ಘೋಷಣೆಯನ್ನು ಕೂಗುವುದರೊಂದಿಗೆ ಆಚರಿಸಲಾಯಿತು.
       ಕುಂದಾಪುರ ತಾಲೂಕು ಡಿವೈಎಫ್ಐ ನ ಉಪಾಧ್ಯಕ್ಷರಾದ ಸುರೇಶ್ ಕಲ್ಲಾಗರ್ ಮಾತನಾಡಿ ಭಗತ್ ಸಿಂಗ್, ರಾಜಗುರು, ಸುಖದೇವ ಸಿಂಗ್ ಈ ಮೂವರು ವೀರರು ತಮ್ಮ ಯವ್ವನದ ದಿನಗಳಲ್ಲಿಯೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದರು. ಈ ಸ್ವಾತಂತ್ಯ ವೀರರ ಆದರ್ಶಗಳನ್ನಿಟ್ಟುಕೊಂಡು ಹುಟ್ಟಿದ ಸಂಘಟನೆಯಾದ ಡಿವೈಎಫ್ಐ, ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಿದೆ ಎಂದರು. 
      ದೇಶಪ್ರೇಮಿಗಳ ಕುಟುಂಬದಲ್ಲಿ ಹುಟ್ಟಿದ ಭಗತ್ ಸಿಂಗ್ ಕ್ರಾಂತಿಕಾರಿಯಾಗಿ ಬೆಳೆದುಬಂದರು. ಜಲಿಯಾನವಾಲಾಬಾಗ್ ಹತ್ಯಾಕಾಂಡದಿಂದ ನೊಂದು ಸ್ವಾಂತತ್ಯ ಹೋರಾಟಕ್ಕೆ ಧುಮಿಕಿದವರು. ಚಂದ್ರಶೇಖರ ಅಜಾದ್ ಅವರ ಮಾರ್ಗದರ್ಶನದಲ್ಲಿ ಹೋರಾಡಿದ ಅವರು ಮುಂದೆ ನೌಜವಾನ್ ಸಭಾದ ಮೂಲಕ ಹೋರಾಟಕ್ಕಿಳಿದ ಭಗತ್ ಸಿಂಗ್ ಇನ್ಕಿಲಾಬ್ ಜಿಂದಾಬಾದ್ ಘೋಷಣೆಯನ್ನು ಮೊದಲ ಭಾರಿಗೆ ನೀಡಿದರು. 1931 ಮಾರ್ಚ್ 23ರಂದ ಅವರು ಬ್ರಿಟೀಷರ ನೇಣುಗಂಬಕ್ಕೇರಿ ವೀರ ಮರಣವನ್ನಪ್ಪುತ್ತಾರೆ. ಅವರ ಆದರ್ಶ, ತತ್ವ, ಸಿದ್ಧಂತಗಳು ಇಂದಿಗೂ ಅನುಕರಣೀಯ ಎಂದರು.
       ಈ ಸಂದರ್ಭದಲ್ಲಿ ಡಿವೈಎಫ್ಐ ಸಂಘಟನೆಯ ತಾಲೂಕು ಅಧ್ಯಕ್ಷ ಸಂತೋಷ ಹೆಮ್ಮಾಡಿ, ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ, ಎಸ್ಎಫ್ಐ ಸಂಘಟನೆಯ ಅಧ್ಯಕ್ಷ ಅಕ್ಷಯ ವಡೇರಹೋಬಳಿ, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ಭಗತ್ ಸಿಂಗ್ ಅವರ ಮುಖವಾಡಗಳನ್ನು ಧರಿಸಿ ಜೈಕಾರವನ್ನು ಕೂಗಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com