ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಸನಾತನ ಹಿಂದೂ ಸಂಸ್ಕೃತಿಯ ಶೈಲಿಯಲ್ಲಿ ಎರಡು ವಿದೇಶಿ ಜೋಡಿಗಳು ಹಸೆಮಣೆ ಏರಿದರು. ಅಲ್ಜೀರಿಯಾ ದೇಶದ ಅದಿಬ್ ಅವರು ರಷ್ಯಾದ ಮರಿನಾ ಅವರನ್ನು ಹಾಗೂ ಪ್ರಾನ್ಸ್ನ ಹಾರ್ವೆ ಮತ್ತು ವೆಂಡಿ ಎಂಬುವವರನ್ನು ವರಿಸಿದರು. ಪುರೋಹಿತ ಬಾಲಕಷ್ಣ ಭಟ್ ಹಿಂದೂ ಸಂಪ್ರದಾಯದ ಮದುವೆಯ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು.
ಇತ್ತಿಚಿಗೆ ಹಿಂದೂ ಸಂಪ್ರದಾಯದಂತೆ ವಿದೇಶಿ ಜೋಡಿಗಳು ಮದುವೆಯಾಗುತ್ತಿರುವುದು ಹೆಚ್ಚಾಗಿದ್ದು ಕೋಟ, ನೀಲಾವರದಲ್ಲಿ ಈ ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ವಿದೇಶಿಗರ ಮದುವೆಯೇ ಮತ್ತಷ್ಟು ಇಂಬುಕೊಡುವಂತಿದೆ.
0 comments:
Post a Comment