ಗ್ರಾ.ಪಂ ಚುನಾವಣೆ: ಕಾಂಗ್ರೆಸ್ ಪೂರ್ವಭಾವಿ ಸಭೆ

ಕುಂದಾಪುರ: ಮೇ ತಿಂಗಳಿನಲ್ಲಿ ನಡೆಯಲಿರುವ ಗ್ರಾ.ಪಂ. ಚುನಾವಣೆಯ ಪೂರ್ವ ತಯಾರಿ ಸಭೆ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ನ ಪಂಚಾಯತ್‌ ಮಟ್ಟದ ಸಮಿತಿ ಸದಸ್ಯರಿಂದ ಜರುಗಿತು. 

   ಆರ್‌.ಎನ್‌.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆದ ಈ ಸಭೆಯಲ್ಲಿ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್‌. ದಿನಕರ ಶೆಟ್ಟಿ, ನಗರ ಯೋಜನಾ ಪ್ರಾಧಿಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಜಾಕೋಬ್‌ ಡಿ'ಸೋಜ, ಭೂಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾದ ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು  ವಿವಿಧ ವ್ಯವಸಾಯ ಸಹಕಾರಿ ಸಂಘಗಳ ಸದಸ್ಯರಾಗಿ ಆಯ್ಕೆಯಾದ ಹರಿಪ್ರಸಾದ್‌ ಶೆಟ್ಟಿ, ಮಹೇಶ್‌ ಹೆಗ್ಡೆ, ಬುದ್ಧರಾಜ ಶೆಟ್ಟಿ, ಜಯರಾಮ ಶೆಟ್ಟಿ, ಮೋಹನ ದಾಸ್‌ ಹೆಗ್ಡೆ, ವಿಕಾಸ್‌ ಹೆಗ್ಡೆ, ಶರತ್‌ ಹೆಗ್ಡೆ, ಅಶೋಕ್‌ ಪೂಜಾರಿ, ಸಂಜೀವ ಚಂದನ್‌, ಶೀನ ಪೂಜಾರಿ, ವಾಣಿ ಶೆಟ್ಟಿ, ದಿನೇಶ್‌ ಖಾರ್ವಿ ಮೊದಲಾದವರಿಗೆ ಕಾಂಗ್ರೆಸ್‌ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

    ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ  ಬಿ. ಹಿರಿಯಣ್ಣ, ನಗರ ಕಾಂಗ್ರೆಸ್‌ ಅಧ್ಯಕ್ಷ ಗಣೇಶ್‌ ಶೇರೆಗಾರ್‌, ಉಪಾಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ಸಂದೀಪ ಪೂಜಾರಿ, ಚಂದ್ರಶೇಖರ ಖಾರ್ವಿ, ಶಕುಂತಳಾ ಗುಲ್ವಾಡಿ, ಹಾಗೂ ಮುಖಂಡರುಗಳಾದ ಚಂದ್ರ ಅಮೀನ್‌, ದಿವಾಕರ ಶೆಟ್ಟಿ, ರಾಮಕೃಷ್ಣ ಹೇರ್ಳೆ, ಯುವ ಮುಖಂಡರಾದ  ಶೈಲೇಶ್‌, ಶ್ರೀಧರ ಆಚಾರ್‌, ಗಣೇಶ ಶೆಟ್ಟಿಗಾರ್‌, ಮಹಿಳಾ ಕಾಂಗ್ರೆಸ್‌ನ ಜ್ಯೋತಿ ಪುತ್ರನ್‌ ಉಪಸ್ಥಿತರಿದ್ದರು.  
    ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ನಾರಾಯಣ ಆಚಾರ್‌ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ. ಶಿವಾನಂದ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com